ಯಕ್ಷ ಕಲಾಸೇವೆಯ ಬೇಡಿಕೆಯ ಪೆಮರ್ುದೆಯವರಿಗೆ ಯಕ್ಷೊತ್ಸವ ಪ್ರಶಸ್ತಿ
ಪೆರ್ಲ: ಪೆರ್ಲದ ಭಾರತೀ ಸದನದಲ್ಲಿ ಈ ಬಾರಿಯ ಪಡ್ರೆ ಯಕ್ಷೊತ್ಸವ ಪ್ರಶಸ್ತಿ ಪ್ರಧಾನ ಹಾಗೂ ಬಯಲಾಟ ಅ.20 ರಂದು ಶನಿವಾರ ನಡೆಯಲಿದ್ದು, ತೆಂಕುತಿಟ್ಟಿನ ಹೆಮ್ಮೆಯ ಕಲಾವಿದ ಜಯಪ್ರಕಾಶ ಶೆಟ್ಟಿ ಪೆಮರ್ುದೆಯವರಿಗೆ ಈ ಬಾರಿಯ ಪ್ರಶಸ್ತಿ ನೀಡಿ ಗಣ್ಯರ ಸಮಕ್ಷಮ ಗೌರವಿಸಲಾಗುವುದು. ಈ ಹಿನ್ನೆಲೆಯಲ್ಲಿ ಯುವ ಬರಹಗಾರ ಮಣಿರಾಜ್ ವಾಂತಿಚ್ಚಾಲ್ ಅವರ ಬರಹ:
ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಕಲಾವಿದರಲ್ಲಿ,ಭರವಸೆ ವೇಷಧಾರಿ ಹಾಗೂ ಅರ್ಥಧಾರಿ ಪೆಮರ್ುದೆ ಜಯಪ್ರಕಾಶ್ ಶೆಟ್ಟಿ ಒಬ್ಬರು.ಆಟ ಕೂಟಗಳೆರಡರಲ್ಲೂ ಸಲ್ಲುವ ಶ್ರೇಷ್ಟ ಕಲಾವಿದರು.ಯಕ್ಷರಂಗದಲ್ಲಿ ತನ್ನದೇ ಆದ ಛಾಪನ್ನು ಸೃಷ್ಟಿಸಿ ಅಪಾರ ಅಭಿಮಾನಿಗಳನ್ನುಹೊಂದಿರುವ ಶೆಟ್ಟರು, ಕಿರಿಯ ಪ್ರಾಯದಲ್ಲೇ ಹಿರಿದನ್ನು ಸಾಧಿಸಿದ ಅಪರ್ೂವ ಕಲಾವಿದರು.
ಬಾಲ್ಯ,ಶಿಕ್ಷಣ ಹಾಗೂ ಕಲಾಸೇವೆ
ಕುಡಾಲುಗುತ್ತು ಬಾಲಕೃಷ್ಣ ಶೆಟ್ಟಿ ಹಾಗೂ ಲೀಲಾವತಿ ಶೆಟ್ಟಿ ದಂಪತಿಯ ಸುಪುತ್ರನಾಗಿ 1975ರ ಏಪ್ರಿಲ್ 26ರಂದು ಜನಿಸಿದ ಜಯಪ್ರಕಾಶ್ ಶೆಟ್ಟಿ ಪೆಮರ್ುದೆ ಅವರು ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಯಕ್ಷಗಾನ ಕ್ಷೇತ್ರದತ್ತ ಆಕಷರ್ಿತರಾದ ಜಯಪ್ರಕಾಶ ಶೆಟ್ಟಿ ಪೆಮರ್ುದೆ ಅವರು ದಾಸನಡ್ಕ ರಾಮ್ ಕುಲಾಲ್ ಅವರ ಪ್ರೇರಣೆಯಿಂದ ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿ ರಂಗಪ್ರವೇಶಿಸಿದರು. ಧರ್ಮತ್ತಡ್ಕದ ಶ್ರೀ ದುಗರ್ಾಪರಮೇಶ್ವರಿ ಹೈಸ್ಕೂಲ್ನಲ್ಲಿ ಎಸ್ ಎಸ್ ಎಲ್ ಸಿ ಶಿಕ್ಷಣ ಪಡೆದರು.ಇವರ ಅಜ್ಜನವರಾದ ಗುಂಪೆ ರಾಮಯ್ಯ ರೈ ಗಳು,ಮಾವ ಪೆರುವಾಯಿ ನಾರಾಯಣ ಶೆಟ್ಟಿಯವರು ಪ್ರಸಿದ್ಧ ಕಲಾವಿದರಾದ ಕಾರಣ ಜಯಪ್ರಕಾಶರೂ,ಯಕ್ಷರಂಗಕ್ಕೆ ಸೇರುವ ಮನಸ್ಸು ಮಾಡಿದರು.
ಅನಂತರದ ದಿನಗಳಲ್ಲಿ ಧರ್ಮಸ್ಥಳದ ಯಕ್ಷ ಕ್ಷೇತ್ರದ ಮಾನ್ಯ ಗುರುಗಳಾದ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ಪೂರ್ಣ ಪ್ರಮಾಣದ ಯಕ್ಷನಾಟ್ಯದ ತರಬೇತಿ ಪಡೆದು,ರಂಗದ ಅನುಭವಕ್ಕಾಗಿ ಶ್ರೇಷ್ಟ ಕಲಾವಿದ ಶ್ರೀಧರ ಭಂಡಾರಿ ನೇತೃತ್ವದ ಕಾಂತಾವರ ಮೇಳದಲ್ಲಿ ತಿರುಗಾಟ ಪ್ರಾರಂಭಿಸಿದರು.ಮುಂದೆ ಬಲಿಪ ನಾರಾಯಣ ಭಾಗವತರ ನಿದರ್ೇಶನದ ಕಟೀಲು ಮೇಳರಲ್ಲಿಸೇರಿಕೊಂಡು ಮಾತುಗಾರಿಕೆ,ರಂಗ ನಡೆಯ ಬಗ್ಗೆ ವಿಶೇಷ ಜ್ಞಾನ ಪಡೆದರು.ನಿತ್ಯ ವೇಷದಿಂದ ತೊಡಗಿ,ಎದುರು ವೇಷಗಳವರೆಗೆ ಕಲಾವಿದನೊಬ್ಬ ಎಳವೆಯಲ್ಲಿಯೇ ಬೆಳೆದು ಬರುವುದು ತೀರ ಅಪರೂಪವದರೂ ಈ ಬೆಳವಣಿಗೆಗೆ ಪೆಮರ್ುದೆ ಜಯಪ್ರಕಾಶ್ ಶಟ್ಟಿ ಅವರು ಜ್ವಲಂತ ಸಾಕ್ಷಿಯಾಗಿದ್ದಾರೆ.
ಪರಿಪೂರ್ಣ ಕಲಾವಿದರಾಗಿ ಕಟೀಲು ಮೇಳದಲ್ಲಿರುವಾಗ ಪೆರುವಾಯಿಯವರೊಂದಿಗಿನ ತಿರುಗಾಟದಲ್ಲಿ ಮಾತುಗಾರಿಕೆಯನ್ನು ಕಲಿತರು.ಯಕ್ಷರಂಗಕ್ಕೆ ನಿಷ್ಟರಾಗಿ,ಛಲದಿಂದ ಯಾವದೇ ಪಾತ್ರಗಳನ್ನು ನಿರ್ವಹಿಸುವ ಸಾಮಥ್ರ್ಯವನ್ನು ಗಳಿಸಿದರು.ಕಟೀಲು ಮೇಳದಲ್ಲಿ 16 ವರ್ಷಗಳ ಕಲಾಸೇವೆ ಸಲ್ಲಿಸಿದ ಜಯಪ್ರಕಾಶ ಶೆಟ್ಟಿ ಅವರು ಪ್ರಸ್ತುತ ಶ್ಯಾಮ್ಭಟ್ ಅವರ ನೇತೃತ್ವದಲ್ಲಿ ಹೊಸನಗರ ಮೇಳದಲ್ಲಿ ಕಳೆದ 9 ವರ್ಷಗಳಿಂದ ಅಭಿಮಾನಿಗಳ ಬೇಡಿಕೆಯ ಕಲಾವಿದರಾಗಿ ಸೇವಾ ನಿರತರಾಗಿದ್ದಾರೆ.
ಕಲಾಭಿಮಾನಿಗಳ ಮನಗೆದ್ದ ಸೊಗಸಿನ ಅರ್ಥಗಾರಿಕೆ
ಆಟ-ಕೂಟಗಳೆರಡರಲ್ಲಿಯೂ ಕಲಾರಸಿಕರಿಂದ ಶ್ಲಾಘಿಸಲ್ಪಡುವ ಪೆಮರ್ುದೆ ಅವರು ಅಪಾರ ಅಭಿಮಾನಿಗಳ ಸರದಾರ. ತನಗೊದಗಿದ ಯಾವ ಗುಣದ ಪಾತ್ರಕ್ಕೂ ರಂಗದಲ್ಲಿ ಜೀವ ತುಂಬಬಲ್ಲ ವಿಶಿಷ್ಟ ತಾರಾ ಮೌಲ್ಯವನ್ನು ಸಾಧನೆಯ ಮೂಲಕ ಸಂಪಾದಿಸಿದ್ದಾರೆ ಜಯಪ್ರಕಾಶ ಶೆಟ್ಟಿ. ನಾವು ಎಲ್ಲವನ್ನು ಗೆಲ್ಲಬಹುದು ಆದರೆ ಇನ್ನೊಬ್ಬರ ಮನಸ್ಸನ್ನು ಗೆಲ್ಲುವುದು ದೊಡ್ಡ ಸವಾಲಾಗಿದೆ.
ಮನಸ್ಸನ್ನು ಗೆದ್ದವ ಸರ್ವಸ್ವವನ್ನು ಗೆದ್ದ ಹಾಗೆ ಹೀಗೆ ಯಕ್ಷಗಾನ ಕ್ಷೇತ್ರದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಕಲಾಭಿಮಾನಿಗಳ ಮನಗೆದ್ದ ಅಪ್ಪಟ ಕಲಾವಿದ ಪೆಮರ್ುದೆ ಅವರು ಪ್ರಸ್ತುತ ಶಬ್ದ ಭಂಡಾರದ ಖನಿಯಾಗಿದ್ದಾರೆ.ಅವರು ಓದಿದ್ದೆಲ್ಲವೂ ಅವರಿಗೆ ಜೀವನಾನುಭವದಿಂದಲೇ ಬಂದಿರುವುದು.
ಅರ್ಥಗಾರಿಕೆಯ ನೈಪುಣ್ಯತೆ ಸಾಧಿಸಿದ ಶೆಟ್ಟರ ಅರ್ಥಗಾರಿಕೆ ಬಲು ಸೊಗಸು.ನಿರರ್ಗಳ,ಶೃತಿ,ಲಯಬದ್ಧವಾದ ಮಾತುಗಾರಿಕೆ,ಉತ್ತಮ ನಾಟ್ಯ,ಹಾಗೂ ಅಭಿನಯ,ಪಾತ್ರದ ಸ್ವಭಾವ ಅರಿತು,ಪಾತ್ರಕ್ಕೆ ಚಿತ್ರಣ ಕೊಡುವದು ಶೆಟ್ಟರ ವಿಶೇಷತೆ.ಯಾವುದೇ ಪಾತ್ರ ನಿರ್ವಹಿಸುವುದಾದರೂ, ಆ ಪಾತ್ರಗಳ ಬಗ್ಗೆ ಆಳವಾದ ಆಧ್ಯಯನ ನಡೆಸಿ,ಆ ಪಾತ್ರಕ್ಕೆ ನ್ಯಾಯ ಒದಗಿಸುವವರು ಶೆಟ್ಟರ ಅರ್ಥಗಾರಿಕಯಲ್ಲಿ "ಪೆರುವಾಯಿ ಶೈಲಿ" ಗುರುತಿಸಬಹುದು.ಶೆಟ್ಟರ ವಾದ ಸಂವಾದ,ಮಂಡನೆ ಖಂಡನೆ,ಪೀಠಿಕಾ ನಿರೂಪಣೆ ಎಲ್ಲಾ ಆಕರ್ಷಣೇಯ ವಾದಕ್ಕೆ ನಿಂತರಂತೂ ಪ್ರೇಕ್ಷರಿಗೆ ರಸದೌತಣ.ಪುರಾಣಲೋಕವನ್ನೇ ಆನಾವರಣ ಗೊಳಿಸುವ ಶೈಲಿ ಶೆಟ್ಟರಿಗೆ ಚೆನ್ನಾಗಿ ಸಿದ್ಧಿಸಿದೆ.
ತಾಳಮದ್ದಳೆ ಕೂಟಗಳಲ್ಲೂ ಮಿಂಚುವ ಶೆಟ್ಟರು:
ತಾಳಮದ್ದಳೆ ಕೂಟಗಳಲ್ಲಿ ದಿ.ಚೆನ್ನಪ್ಪ ಶೆಟ್ಟಿ,ಮೂಡಂಬೈಲು,ಡಾ ಜೋಷಿ,ಸುಣ್ಣಂಬಳ,ಉಜ್ರೆ ಅಶೋಕ ಭಟ್,ಶಂಭುಕರ್ಮ,ಜಬ್ಬಾರ್,ಗೊವಿಂದ ಭಟ್,ಕೊಳ್ಯುರು ಕಲ್ಚಾರ್,ಹಿರಣ್ಯ,ವಾ.
ರಂಗಾ ಭಟ್,ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ,ತಾರನಾಥ ವಕರ್ಾಡಿ ಮುಂತಾದ ಘಟಾನುಘಟಿಗಳೊಂದಿಗೆ ಅರ್ಥ ಹೇಳಿ ಮಿಂಚಿದ್ದಾರೆ.
ಯಕ್ಷಗಾನದಲ್ಲಿ ಶುದ್ಧ ಕನ್ನಡವನ್ನು,ಸಂಸ್ಕ್ರತ ಶ್ಲೋಕಗಳನ್ನು ಕಲಾಭಿಮಾನಿಗಳ ಮನಮುಟ್ಟುವಂತೆ,ಹೃದಯ ತಟ್ಟುವಂತೆ ವಿಂಗಡಿಸಿ ಹೇಳಲು ವ್ಯಾಕರಣದ ಜ್ಞಾನವನ್ನು ಹೊಂದಬೇಕು. ಇವೆಲ್ಲ ಪರಸ್ಪರ ಚಚರ್ೆಯಿಂದ ಅಥವಾ ಹೇಳಿ ಕೇಳಿ,ತಿಳಿದು ಬರುವಂಥದ್ದು.ಇದೇ ಮಾತನ್ನು ಅರಿತಿರುವ ಪೆಮರ್ುದೆ ಅವರು ಕೆಲವೊಂದನ್ನು ಬಲ್ಲವರಿಂದ ಕಲಿತು ಕೆಲವೊಂದನ್ನು ತನ್ನ ಪರಿಶ್ರಮದ ಮೂಲಕ ಅರಗಿಸಿಕೊಂಡು ಇಂದು ತೆಂಕುತಿಟ್ಟಿನಲ್ಲಿ ಪ್ರಬುದ್ಧ ಕಲಾವಿದರಾಗಿ ಕಂಗೊಳಿಸುತ್ತಿದ್ದಾರೆ.ಪೆಮರ್ುದೆ ಅವರಿಗೆ ಕಲಿಯುವ ತುಡಿತ ಇಂದಿಗೂ ಇದೆ ಎಂಬುವುದು ವರ್ಷದಿಂದ ವರ್ಷಕ್ಕೆ ಅವರು ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವುದು ಸಾಕ್ಷಿಯಾಗಿದೆ.ಸತತ ಪ್ರಯತ್ನ ಏಕಾಗ್ರತೆ,ಪರಿಶ್ರಮ ಶ್ರದ್ಧೆ,ಇತ್ಯಾದಿಗಳನ್ನೆ ಮೂಲಮಂತ್ರವನ್ನಾಗಿಸಿಕೊಂಡು ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಅಪಾರ ಜ್ಙಾನ ಭಂಡಾರ, ಶಬ್ಧ ಭಂಡಾರವನ್ನು ಹೊಂದಿದ್ದಾರೆ.ತಾಳಮದ್ದಳೆ ಅರ್ಥದಾರಿಯಾಗಿ, ಯಕ್ಷಗಾನ ಘಟಾನುಘಟಿ ಕಲಾವಿದರ ಮುಂದೆ ಮಾತಿನೊಂದಿಗೆ ಹಟ ಬಿಡದ ತ್ರಿವಿಕ್ರಮನಂತೆ ಸೆಣಸಾಡುವ ಪರಿಯಂತು ರೋಮಾಂಚನಗೊಳಿಸುತ್ತದೆ.
ಸರಳ ಸಜ್ಜನಿಕೆಯ ಯುವಕಲಾವಿದ ಜಯಪ್ರಕಾಶ ಶೆಟ್ಟರ ಪ್ರತಿಭೆ ಗುರುತಿಸಿ ಅ. 20ರಂದು ಶನಿವಾರದಂದು ಪೆರ್ಲದ ಭಾರತೀ ಸದನದಲ್ಲಿ ಈ ಬಾರಿಯ ಪಡ್ರೆ ಯಕ್ಷೊತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಕಲಾಮಾತೆಯ ಸೇವೆ ಮುಂದೆಯೂ ಮಾಡುತ್ತಾ ಹಲವು ಪ್ರಶಸ್ತಿ ಸಮ್ಮಾನಗಳು ತಮ್ಮ ಮುಡಿಗೇರಲಿ ಎಂದು ಹಾರೈಸೋಣ.
-ಮಣಿರಾಜ್ ವಾಂತಿಚ್ಚಾಲು