HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಆವಳ  ಮಠದಲ್ಲಿ ದೀಪೋತ್ಸವ ಕಾರ್ಯಕ್ರಮ, ರಂಜಿಸಿದ ಗೀತಾ ಸಾಹಿತ್ಯ ಸಂಭ್ರಮ
    ಉಪ್ಪಳ: ನವವರಾತ್ರಿ ಅಂಗವಾಗಿ ಆವಳಮಠ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ಹಣತೆ ಬೆಳಗುವ ವಿಶೇಷ ಕಾರ್ಯಕ್ರಮ ದೀಪೋತ್ಸವ ಭಾನುವಾರ ರಾತ್ರಿ ಜರಗಿತು. ಶರನ್ನವರಾತ್ರಿ ಸಂದರ್ಭ ಏರ್ಪಡಿಸಲಾದ ಸಹಸ್ರ ದೀಪೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾಭಿಮಾನಿಗಳು ಪಾಲ್ಗೊಂಡರು. ದೇವಸ್ಥಾನದಲ್ಲಿ ನೂತನವಾಗಿ ನಿಮರ್ಾಣಗೊಳ್ಳುತ್ತಿರುವ ಸ್ವಾಗತ ಗೋಪುರದಿಂದ ಗರ್ಭಗುಡಿಯ ತನಕ ದೀಪಗಳ ಮೂಲಕ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಅಂಗಣದಲ್ಲಿ ಶ್ರೀದೇವಿಯ ರಂಗೋಲಿ ರಚಿಸಿ ಹಣತೆ ಬೆಳಗಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಾತೆಯರು ಪಾಲ್ಗೊಂಡು ಹಣತೆ ಬೆಳಗಿದರು. ಇದೇ ಸಂದರ್ಭ ಶ್ರೀ ರಾಜರಾಜೇಶ್ವರಿ ಕಕ್ವೆ ವ್ಯಾಯಾಮ ಶಾಲೆ ವತಿಯಿಂದ ತಾಲೀಮು ಪ್ರದರ್ಶನ ನಡೆಯಿತು. 
   ಬೆಳಿಗ್ಗೆ ಜರುಗಿದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಬಂಟ್ವಾಳದ ವಿಠಲ ನಾಯಕ್ ನಡೆಸಿಕೊಟ್ಟರು. ಶ್ರೀ ದೇವಿ ಫ್ರೆಂಡ್ಸ್ ಪ್ರಾಯೋಜಕತ್ವದ ಕಾರ್ಯಕ್ರಮವು ಸ್ಥಿತ್ಯಂತರ ಕಾಲಘಟ್ಟದಲ್ಲಿ ಮರೆಯಾಗುತ್ತಿರುವ ಸಂಸ್ಕೃತಿ ಆಚರಣೆಗಳು ಸಹಿತ ಮಾನವೀಯ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲಿತು. ನವರಾತ್ರಿ ಸಂದರ್ಭ ದೇವಿಗೆ ಲಕ್ಷಾರ್ಚನೆ ಸೇವೆ, ಹೂವಿನ ಪೂಜೆ ನಡೆಯುತ್ತಿದ್ದು, ವಿವಿಧ ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.17 ರಂದು ಬುಧವಾರ ರಾತ್ರಿ 7 ಗಂಟೆಗೆ ಪ್ರೊ. ವಿಷ್ಣು ಭಟ್ ಸಜಂಕಿಲ ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪ್ರೊ. ದತ್ತಾತ್ರೇಯ ರಾವ್ ಮತ್ತು ತನ್ಮಯಿ ರಾವ್ರವರ ಹಾಡುಗಾರಿಕೆ ಇರಲಿದೆ. ವಯಲಿನ್ ವಾದನದಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ್ ಯೋಗೀಶ್ ಶಮರ್ಾ ಬಳ್ಳಪದವು ಸಹಕರಿಸಲಿದ್ದಾರೆ. ಅ.18 ಬುಧವಾರದಂದು ಶ್ರದ್ಧಾ ಭಟ್, ನಾರ್ಯಪಳ್ಳರಿಂದ ಹರಿಕಥಾ ಕಾರ್ಯಕ್ರಮ ನಡೆಯಲಿದೆ. ಯುವ ಕರಾಡ ಕನಿಯಾಲ ಸಂಘ ಪ್ರಾಯೋಜಿಸಲಿದೆ. ನವಮಿಯಂದು ರಾತ್ರಿ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುವ ಮೂಲಕ ನವರಾತ್ರಿ ಸಂಪನ್ನಗೊಳ್ಳಲಿದೆ. ವಿಜಯದಶಮಿ ದಿನದಂದು ಮಧ್ಯಾಹ್ನ ಜಟಾಧಾರಿ ದೈವದ ಸಮಾರಾಧನೆ ಹಾಗೂ ರಾತ್ರಿ ದೈವದ ಕೋಲವು ಜರುಗಲಿದೆ.



            

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries