HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕಾವ್ಯಶ್ರೀ ಅಜೇರು ಅವರ ಭಾಗವತಿಕೆಯೊಂದಿಗೆ ಪಡ್ರೆಯಲ್ಲಿ ಸಂಪನ್ನಗೊಂಡ ಕೃಷ್ಣಾಜರ್ುನ ತಾಳಮದ್ದಳೆ.
    ಪೆರ್ಲ: ಸಿರಿಚಂದನ ಕನ್ನಡ ಯುವಬಳಗ  ಕಾಸರಗೋಡು ಇದರ ನೇತೃತ್ವದಲ್ಲಿ ನಡೆದು ಬರುತ್ತಿರುವ ಯಕ್ಷನುಡಿಸರಣಿ ಮನೆ ಮನೆ ಅಭಿಯಾನದ ಏಳನೆಯ ಕಾರ್ಯಕ್ರಮ ಪಡ್ರೆ ವಾಣಿನಗರದ ಕುತ್ತಾಜೆಯ ಗಣಪತಿ ನಾಯಕ್ ಅವರ ಸಾರಸ್ವತ ನಿವಾಸದಲ್ಲಿ ಶನಿವಾರ ನಡೆಯಿತು.
    ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ, ನಾಟ್ಯಗುರು ದಿವಾಣ ಶಿವಶಂಕರ ಭಟ್ ಅವರು ಸಕಲ ಕಲೆಗಳನ್ನು ತನ್ನೊಳಗಿರಿಸಿಕೊಂಡ ಯಕ್ಷಗಾನಕ್ಕೆ ಮನರಂಜನೆಯನ್ನು ನೀಡುವ ಶಕ್ತಿ ಹಾಗೂ ಮನುಷ್ಯನ ಬೌದ್ದಿಕ ವಿಕಾಸಕ್ಕೆ ನೆರವಾಗುತ್ತಿದೆ. ಹಾಗೂ ಇದು ಆತನ ತಾತ್ವಿಕ ಪರಿಜ್ಞಾನವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.   
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷನುಡಿಸರಣಿ ಸಂಚಾಲಕ ನವೀನ ಕುಂಟಾರು ವಹಿಸಿದ್ದರು. ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆ, ಗಣಪತಿ ನಾಯಕ್,  ಬಳಗದ ಜೊತೆಕಾರ್ಯದಶರ್ಿ ಸೌಮ್ಯಾಪ್ರಸಾದ್, ಏಳನೆಯ ಸರಣಿಯ ಕಾರ್ಯಕ್ರಮ ಸಂಯೋಜಕ ಕಾತರ್ಿಕ್ ಪಡ್ರೆ, ಸುಜಿತ್ ಕುಮಾರ್ ಉಪ್ಪಳ, ಪ್ರದೀಪ್ ಎಡನೀರು, ಮಹೇಶ ಏತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಿರಿಚಂದನ ಕನ್ನಡ ಯುವಬಳಗದ ಸದಸ್ಯರಿಂದ ಕೃಷ್ಣಾಜರ್ುನ ಎಂಬ ಯಕ್ಷಗಾನ ತಾಳಮದ್ದಳೆಯು ನೆರವೇರಿತು. ಉದಯೋನ್ಮುಖ ಯುವ ಯಕ್ಷಪ್ರತಿಭೆ ಕುಮಾರಿ ಕಾವ್ಯಶ್ರೀ ಅಜೇರು ಅವರು ಪ್ರಧಾನ ಭಾಗವತರಾಗಿ ಕಾರ್ಯಕ್ರಮಕ್ಕೆ ಕಳೆತುಂಬಿದರು. ಹಿಮ್ಮೇಳದಲ್ಲಿ ಯೋಗೀಶ ಕಡಂಬಳಿತ್ತಾಯ, ಯತೀಶ ಬಲ್ಲಾಳ್ ನಾಟೆಕಲ್ಲು, ಶ್ರೀಪತಿ ನಾಯಕ್, ಶ್ರೀಸ್ಕಂದ ದಿವಾಣ ಸಹಕರಿಸಿದರು.
    ಅರ್ಥಧಾರಿಗಳಾಗಿ ಬಳಗದ ಸದಸ್ಯರಾದ ಶಶಿಧರ ಕುದಿಂಗಿಲ (ಕೃಷ್ಣ), ದಿವಾಕರ ಬಲ್ಲಾಳ ಎ ಬಿ (ಅಜರ್ುನ), ನವೀನ ಕುಂಟಾರು (ಭೀಮ), ಪ್ರಶಾಂತ ಪಡ್ರೆ (ದಾರುಕ), ಮನೋಜ ಎಡನೀರು (ಬಲಭದ್ರ), ಕಾತರ್ಿಕ್ ಪಡ್ರೆ (ಸುಭದ್ರೆ), ಮಣಿಕಂಠ ಪಾಂಡಿಬಯಲು (ಶಿವ) ಭಾಗವಹಿಸಿದರು. ಪ್ರಶಾಂತ ಪಡ್ರೆ ಸ್ವಾಗತಿಸಿ, ಮಣಿಕಂಠ ಪಾಂಡಿಬಯಲು ವಂದಿಸಿದರು.

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries