ಆಧುನಿಕ ಮಾಧ್ಯಮಗಳು ಸಾಹಿತ್ಯಕ್ಕೆ ಪೂರಕ-ಹ.ಸು.ಒಡ್ಡಂಬೆಟ್ಟು
ಮಂಜೇಶ್ವರ: ಸಮೂಹ ಮಾಧ್ಯಮಗಳಿಂದಾಗಿ ಸಾಹಿತ್ಯದಲ್ಲಿ ಯುವ ಜನತೆಗೆ ಆಸಕ್ತಿ ಬೆಳೆಯುತ್ತಿದೆ. ವಾಟ್ಸಾಪ್ ಫೇಸ್ಬುಕ್ಗಳು ಸಾಹಿತ್ಯ ಸಂವಹನಕ್ಕೆ ವೇದಿಕೆಯಾಗಿ ಬರಹಗಳ ಸಾಗರವಾಗಿದೆ. ಭಾಷೆ-ಸಾಹಿತ್ಯಗಳ ಬೆಳವಣಿಗೆಗಳಿಗೆ ಆಧುನಿಕ ವ್ಯವಸ್ಥೆಗಳು ಪೂರಕವಾಗಿ ಮೂಡಿಬರುತ್ತಿದೆ ಎಂದು ಗಡಿನಾಡ ಚುಟುಕು ಸಾಹಿತಿ, ಮಂಜೇಶ್ವರ ಸಿರಿಗನ್ನಡ ವೇದಿಕೆ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ವತಿಯಿಂದ ಭಾನುವಾರ ಅಪರಾಹ್ನ ಆಯೋಜಿಸಿದ್ದ ವೈವಿಧ್ಯ ಕಾವ್ಯ ವೈಭವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿತೆಗಳು ಓದುಗನ ಮನ ಮುಟ್ಟುವಂತೆ ಇರಬೇಕು. ಆಗಲೇ ಕವಿತೆಗೆ ಮತ್ತು ಕವಿಗೆ ಮಾನ್ಯತೆ ಲಭಿಸುವುದು ಎಂದು ತಿಳಿಸಿದ ಅವರು, ಸಮಕಾಲೀನ ವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲುವ ಸಾಮಾಜಿಕ ಕಳಕಳಿಯ ಸತ್ದರ್ಶನ ನೀಡುವ ಕವಿತೆಗಳು ಜನಪ್ರೀಯತೆ ಗಳಿಸುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರದ ಆಡಳಿತ ಸಮಿತಿ ಪ್ರಧಾನ ಕಾರ್ಯದಶರ್ಿ ಭಾಸ್ಕರ ಆಚಾರ್ಯ ಪ್ರತಾಪನಗರ ಮಾತನಾಡಿ, ಸಾಹಿತ್ಯದ ಮೂಲಕ ಸಮಾಜವನ್ನು ಜಾಗೃತವಾಗಿರಿಸುವ ಕಾರ್ಯ ಶ್ಲಾಘನೀಯ. ವಿಶ್ವಕರ್ಮ ಸಮಾಜದಿಂದಲೂ ಸಾಹಿತ್ಯದ ಪ್ರತಿಭೆಗಳು ಬೆಳಗಿ ಬರುತ್ತಿರುವುದು ಭವಿಷ್ಯಕ್ಕೆ ಉತ್ತಮ ಲಕ್ಷಣವೆಂದು ಅವರು ಹೇಳಿದರು.
ವೇದಿಕೆಯಲ್ಲಿ ಕ್ಷೇತ್ರದ ಮಹಿಳಾ ಸಂಘದ ಉಪಾಧ್ಯಕ್ಷೆ ಭಾನುಮತಿ ಅನಂತ ಆಚಾರ್ಯ ಮಠದ ಬಳಿ, ಓಜ ಸಾಹಿತ್ಯ ಕೂಟದ ಚಂದ್ರ ಮೋಹನ ಆಚಾರ್ಯ ಕಟ್ಟೆಬಜಾರ್, ಚಂದ್ರಶೇಖರ ಆಚಾರ್ಯ ಐಲ, ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡಿನ ಸಂಸ್ಥಾಪಕ ಜಯ ಮಣಿಯಂಪಾರೆ ಉಪಸ್ಥಿತರಿದ್ದು ಶುಭಾಶಂಸನೆಗೈದರು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಗುಣಾಜೆ ರಾಮಚಂದ್ರ ಭಟ್, ನಾರಾಯಣ ಕುಂಬ್ರ, ಉದಯರವಿ ಕೆಂಬ್ರಾಜೆ, ತೇಜಸ್ವಿನಿ ಕಡೆಂಗೋಡಿ, ವಿರಾಜ್ ಅಡೂರು, ವಿಶಾಲಾಕ್ಷಿ. ವಿ. ಕಣ್ವತೀರ್ಥ, ರಿತೇಶ್ ಕಿರಣ್ ಕಾಟುಕುಕ್ಕೆ, ದಯಾನಂದ ರೈ ಕಲ್ಪಾಜೆ, ಶ್ರೀಧರ ನಾಯ್ಕ್ ಕುಕ್ಕಿಲ, ಸುಕುಮಾರ್ ಬೆಟ್ಟಂಪಾಡಿ, ಸುಶೀಲ. ಕೆ ಪದ್ಯಾಣ, ಜೋತ್ಸ್ನಾ ಎಂ.ಕಡಂದೇಲು, ಶ್ವೇತಾ ಕಜೆ, ಚೇತನಾ ಕುಂಬಳೆ, ಶ್ಯಾಮಲಾ ರವಿರಾಜ್ ಕುಂಬಳೆ, ಮಣಿರಾಜ್ ವಾಂತಿಚ್ಚಾಲ್, ಡಾ. ನರೇಶ್ ನೆಳಗುಳಿ, ಅಕ್ಷಿತಾ ಮಾಯಿಪ್ಪಾಡಿ, ರಶ್ಮಿತಾ ಆಚಾರ್ಯ ಹೊಸಂಗಡಿ, ನಯನ ಕೋಟೆಕಾರ್, ಮೌನೇಶ್ ಆಚಾರ್ಯ ಕಡಂಬಾರ್, ಅಶೋಕ ಆಚಾರ್ಯ ಉದ್ಯಾವರ, ರೇಣುಕಾ ಹರೀಶ್ ಆಚಾರ್ಯ ಉಪ್ಪಳ, ವೀಕ್ಷಿತಾ ಹೊಸಂಗಡಿ, ಲೇಖನ ಐಲ, ಆದ್ಯಂತ್ ಅಡೂರು, ಅಭಿಲಾಷ್ ಪೆರ್ಲ ಮೊದಲಾದವರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡಿನ ಸದಸ್ಯ ಕಾಂಚನ ಕೋಟೆಕಾರ್ ಸ್ವಾಗತಿಸಿ, ರಶ್ಮಿತಾ ಆಚಾರ್ಯ ಹೊಸಂಗಡಿ ವಂದಿಸಿದರು. ವಿನೋದ್ ಆಚಾರ್ಯ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.