HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕೇರಳ ಸರಕಾರವು ಶಬರಿಮಲೆಯನ್ನು  ಟೂರಿಸ್ಟ್  ಕೇಂದ್ರವನ್ನಾಗಿಸಲು ಯತ್ನಿಸುತ್ತಿದೆ : ಹಿಂದು ಐಕ್ಯ ವೇದಿಕೆ
     ಕುಂಬಳೆ: ಸುಪ್ರೀಂಕೋಟರ್್ನ ತೀರ್ಪನ್ನು  ಮುಂದಿರಿಸಿ ರಾಜ್ಯದಲ್ಲಿ  ಆಡಳಿತ ನಡೆಸುತ್ತಿರುವ ನಾಸ್ತಿಕವಾದಿ ಸರಕಾರವು ಶಬರಿಮಲೆಯ ಪವಿತ್ರ ಸನ್ನಿಧಾನವನ್ನು  ಪ್ರವಾಸಿ ಕೇಂದ್ರವನ್ನಾಗಿಸಲು ಷಡ್ಯಂತ್ರ ನಡೆಸಿ ಆ ಮೂಲಕ ಸರಕಾರದ ಆದಾಯ ಹೆಚ್ಚಿಸಲು ಹುನ್ನಾರ ನಡೆಸುತ್ತಿದೆ ಎಂದು ಹಿಂದು ಐಕ್ಯ ವೇದಿಕೆಯ ಮಂಜೇಶ್ವರ ತಾಲೂಕು ಸಮಿತಿಯು ಗಂಭೀರವಾಗಿ ಆರೋಪಿಸಿದೆ.
    ಅನ್ಯಮತೀಯರ ಆರಾಧನಾಲಯಗಳ ಆಡಳಿತದಲ್ಲಿ, ಆಥರ್ಿಕ ವ್ಯವಹಾರದಲ್ಲಿ  ಹಸ್ತಕ್ಷೇಪ ನಡೆಸಲು ಧೈರ್ಯ ತೋರದ ಕಪಟ ಸೆಕ್ಯುಲರ್ವಾದಿಗಳಿಗೆ ಹಿಂದು ದೇವಾಲಯಗಳು ಹಣ ಗಳಿಸುವ ಕೇಂದ್ರವಾಗಿ ಕಾಣಿಸುತ್ತಿವೆ. ಶಬರಿಮಲೆಗೆ ಎಲ್ಲ  ವಯಸ್ಸಿನ ಮಹಿಳೆಯರ ಮತ್ತು  ಯುವತಿಯರ ಪ್ರವೇಶಕ್ಕೆ ಅನುವು ಮಾಡಲು ಕೇರಳದ ಎಡರಂಗ ಸರಕಾರವು ತೋರುವ ಉತ್ಸಾಹ ಮಹಿಳೆಯರ ಮೇಲಿನ ಗೌರವದಿಂದಲ್ಲ  ಬದಲಾಗಿ ಪ್ರತಿವರ್ಷ ಲಕ್ಷಾಂತರ ಯುವತಿಯರ ಸಂದರ್ಶನದಿಂದ ಕೋಟ್ಯಾಂತರ ರೂ. ಗಳ ಆಥರ್ಿಕ ಆದಾಯದ ಮೇಲೆ ಕಣ್ಣಿಟ್ಟು  ತೋರ್ಪಡಿಸುವ ಕಪಟ ಸ್ತ್ರೀವಾದವಾಗಿದೆ ಎಂದು ಹಿಂದು ಐಕ್ಯ ವೇದಿಕೆ ತಿಳಿಸಿದೆ.
    ಹಿಂದು ಧರ್ಮ ಮತ್ತು  ಸಂಸ್ಕೃತಿಯನ್ನು  ಅವಹೇಳನಗೈಯ್ಯುವ ಪ್ರಗತಿಪರರಿಗೆ, ದೇವರಲ್ಲೂ  ಜಾತಿ ಹುಡುಕುವ, ಪುರಾಣಗಳನ್ನು  ಕಟ್ಟು ಕಥೆಗಳೆನ್ನುವ ಎಡಪಂಥೀಯರಿಗೆ, ದೇವಿ ಚಾಮುಂಡೇಶ್ವರಿಯ ಮುಂದೆ ಮಹಿಷಾಸುರನನ್ನು  ವೈಭವೀಕರಿಸುವ ವಿಚಾರವಾದಿಗಳಿಗೆ, ಧಾಮರ್ಿಕ ಚಟುವಟಿಕೆಗಳಿಂದ ದೂರವಿರುವಂತೆ ಪಕ್ಷದ ಹಿಂದು ಕಾರ್ಯಕರ್ತರನ್ನು  ನಿಯಂತ್ರಿಸುವ ಕಪಟ ಮತೇತರ ಕಮ್ಯೂನಿಸ್ಟರಿಗೆ ಶಬರಿಮಲೆ ಕ್ಷೇತ್ರದಲ್ಲಿ  ಯುವತಿಯರಿಗೆ ಪ್ರವೇಶ ನೀಡಬೇಕೆಂಬ ಹಠವೇಕೆ ಎಂದು ಹಿಂದು ಐಕ್ಯ ವೇದಿಕೆಯು ಪ್ರಶ್ನಿಸಿದೆ.
    ಹಿಂದು ಕ್ಷೇತ್ರಗಳ ಸಂಪ್ರದಾಯಗಳನ್ನು  ಮತ್ತು  ಆಚಾರ ಅನುಷ್ಠಾನಗಳನ್ನು ಉಲ್ಲಂಘಿಸಲು ಪ್ರಚೋದನೆ ನೀಡುವ ವಾಮವಾದಿಗಳ ಇಂತಹ ಸಂಚಿನ ಬಗ್ಗೆ  ಹಿಂದು ಸಮಾಜವು ಸದಾಕಾಲ ಜಾಗೃತರಾಗಿರಬೇಕೆಂದು ಹಿಂದು ಐಕ್ಯ ವೇದಿಕೆಯ ಮಂಜೇಶ್ವರ ತಾಲೂಕು ಸಮಿತಿಯು ಎಚ್ಚರಿಸಿದೆ.   ಕೇರಳದ ಎಲ್ಡಿಎಫ್ ಸರಕಾರವು ಧೈರ್ಯವಿದ್ದಲ್ಲಿ  ಎಲ್ಲ  ಮತ ಧರ್ಮದವರ ಆರಾಧನಾಲಯಗಳ ವಿಚಾರದಲ್ಲಿ  ಕೈಹಾಕಲಿ ಎಂದು ಸಮಿತಿಯು ಸವಾಲು ಹಾಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries