HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಜಿಲ್ಲಾ ವಾಷರ್ಿಕ ಸಮ್ಮೇಳನ
                 ಆಚಾರ, ಅನುಷ್ಠಾನ ಸಂರಕ್ಷಿಸಲು ಕಾನೂನು ಜಾರಿಗೊಳಿಸಲು ಆಗ್ರಹ
     ಮುಳ್ಳೇರಿಯ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಜಿಲ್ಲಾ ವಾಷರ್ಿಕ ಸಮ್ಮೇಳನ ಉದಯಗಿರಿ ಶ್ರೀಹರಿ ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆಯಿತು.
     ಅಪ್ಪಕುಂಞಿ ಗುರುಸ್ವಾಮಿ ಅಡೂರು ಅವರು ದೀಪ ಬೆಳಗಿಸಿದರು. ಅಯ್ಯಪ್ಪ ಸೇವಾ ಸಮಾಜ ರಾಜ್ಯ ಪ್ರಧಾನ ಕಾರ್ಯದಶರ್ಿ ಎಂ.ಕೆ.ಅರವಿಂದಾಕ್ಷನ್ ಉದ್ಘಾಟಿಸಿ ಶಬರಿಮಲೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸಲು ಮತ್ತು ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗದಂತೆ ಕೇರಳ ಸರಕಾರ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
  ಸಮ್ಮೇಳನದಲ್ಲಿ ಅಯ್ಯಪ್ಪ ಸೇವಾ ಸಮಾಜ ಜಿಲ್ಲಾ ಅಧ್ಯಕ್ಷ ಎ.ಸಿ.ಮುರಳೀಧರನ್ ಅಧ್ಯಕ್ಷತೆ ವಹಿಸಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅನುಗ್ರಹ ಭಾಷಣ ಮಾಡಿದರು. ಸಂಘಟನಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ಚಿನ್ಮಯ ಮಿಶನ್ ಅಧ್ಯಕ್ಷ ಎ.ಕೆ.ನಾಯರ್, ಮಾತಾ ಅಮೃತಾನಂದಮಯಿ ಮಠದ ಎಂ.ಕೆ.ನಾಯರ್, ಆಟರ್್ ಆಫ್ ಲಿವಿಂಗ್ನ ಹಿರಿಯ ಅಧ್ಯಾಪಕ ಎ.ನಾರಾಯಣನ್, ಎನ್ಎಸ್ಎಸ್ ತಾಲೂಕು ಘಟಕದ ಅಧ್ಯಕ್ಷ ನ್ಯಾಯವಾದಿ ಎ.ಬಾಲಕೃಷ್ಣನ್ ನಾಯರ್, ಉದಯಗಿರಿ ಶ್ರೀ ವಿಷ್ಣುಮೂತರ್ಿ ಸೇವಾ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರನ್, ಮುಚ್ಚಿಲೋಟ್ ಶ್ರೀ ಭಗವತಿ ಕ್ಷೇತ್ರದ ಕೆ.ಸುರೇಶ್ ಮೊದಲಾದವರು ಮಾತನಾಡಿದರು.
     ಕಾರ್ಯಕ್ರಮಕ್ಕೆ ಗಣಪತಿ ಕೋಟೆಕಣಿ, ಕೆ.ಆರ್.ಪ್ರಮೋದ್, ಮೋನಪ್ಪ ಗುರುಸ್ವಾಮಿ, ಹರೀಶ್ ಕೆ.ಜಿ.ಕೂಡ್ಲು, ಸೂರಜ್ ಅಣಂಗೂರು, ರವಿ ಶೆಟ್ಟಿ ಬದಿಯಡ್ಕ, ರವಿ ಶೇಣಿ, ಉಮೇಶ್ ಗುರುಸ್ವಾಮಿ, ರವಿ ಕೇಳುಗುಡ್ಡೆ, ಸಂತೋಷ್ ಭಂಡಾರಿ ಮೊದಲಾದವರು ನೇತೃತ್ವ ನೀಡಿದರು.
   ಎಂ.ಬಾಲಕೃಷ್ಣನ್ ನಂಬ್ಯಾರ್ ಪೆರ್ಲಡ್ಕ ಸ್ವಾಗತಿಸಿ, ಜಿಲ್ಲಾ ಕಾರ್ಯದಶರ್ಿ ಎಂ.ಕೆ.ಲಕ್ಷ್ಮಣನ್ ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries