ಮುಳ್ಳೇರಿಯ ಹವ್ಯಕ ಮಂಡಲದ ಸಭೆ
ಮುಳ್ಳೇರಿಯ: ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆ ಚಂದ್ರಗಿರಿ ವಲಯ ಬಜೆ ಘಟಕದ ವಿಷ್ಣು ಭಟ್ ಅವರ ನಿವಾಸದಲ್ಲಿ ನಿವಾಸದಲ್ಲಿ ಇತ್ತೀಚೆಗೆ ಜರುಗಿತು. ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು.
ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕವಾಗಿ ಮಾತನಾಡಿ, ವರದಿ ಮಂಡಿಸಿದರು. ಕೋಶಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಗಬ್ಲಡ್ಕ ಲಕ್ಷ್ಮೀಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು.
ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ ಸಂಘಟನಾತ್ಮಕ ವಿಚಾರಗಳನ್ನು ವಿಸ್ತರಿಸಿದರು.
ಮಹಾಮಂಡಲ ಧರ್ಮಕರ್ಮ ವಿಭಾಗ ಸಹಕಾರ್ಯದಶರ್ಿ ವೇ ಮೂ ಕೇಶವ ಪ್ರಸಾದ ಕೂಟೇಲು ವೈದಿಕ, ಸಂಸ್ಕಾರ ಮತ್ತು ಧರ್ಮಕರ್ಮ ವಿಭಾಗಗಳ ಮುಂದಿನ ಯೋಜನೆಗಳು ಮತ್ತು ಅಮೃತಧಾರಾ ಗೋಶಾಲೆಯಲ್ಲಿ ನವಂಬರ್ 8 ರಿಂದ 15 ರ ವರೆಗೆ ಜರಗಲಿರುವ ಗೋಪಾಷ್ಟಮೀ ಸಮಾರಂಭದ ಕುರಿತು ಸಮಗ್ರ ಮಾಹಿತಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಚಂದ್ರಗಿರಿ ವಲಯದ ಕುಳೂರು ಘಟಕದ ಚೌಕ್ಕಾಡು ನಿವಾಸಿ ಹಿರಿಯರಾದ ಪಾಕಶಾಸ್ತ್ರ ಪ್ರವೀಣ ಗೋವಿಂದ ಭಟ್ ಇವರನ್ನು ಶ್ರೀ ಸಂಸ್ಥಾನದವರಿಂದ ಮಂತ್ರಾಕ್ಷತಾ ಆಶೀವರ್ಾದ ಮೂಲಕ ಅನುಗ್ರಹಿಸಲ್ಪಟ್ಟ ಶಾಲನ್ನು ಹೊದೆಸಿ ಫಲ ಮತ್ತು ಸನ್ಮಾನ ಪತ್ರವನ್ನು ನೀಡಿ ಗೌರವಿಸಲಾಯಿತು.
ಮಂಡಲಾಧ್ಯಕ್ಷ ಪ್ರೊ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಾಮೂಹಿಕ ಭಜನಾ ರಾಮಾಯಣ, ಸಾಮೂಹಿಕ ರಾಮಜಪ, ಶಾಂತಿಮಂತ್ರ, ಧ್ವಜಾವರೋಹಣ ಶಂಖನಾದವಾಗಿ ಸಭೆ ಮುಕ್ತಾಯವಾಯಿತು.