HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬದಿಯಡ್ಕದ ಶಾರದೋತ್ಸವ ಸಮಾರೋಪ
  ಬದಿಯಡ್ಕ: ಪ್ರತಿಯೊಬ್ಬ ಮನುಷ್ಯನ ಅಂತರ್ಯದಲ್ಲೊಂದು ಶಕ್ತಿಯಿದೆ. ಅದನ್ನು ಬೆಳಕಿಗೆ ತರುವಲ್ಲಿ ಧಾಮರ್ಿಕ ಚಿಂತನೆಗಳ ಮೂಲಕ ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ, ಬಿಇಎಲ್ ಹಿರಿಯ ಉಪ ಪ್ರಬಂಧಕ  ನರಸಿಂಹ ನಾಯ್ಕ ಹೇಳಿದರು.
ಬದಿಯಡ್ಕ ಶ್ರೀ ಗುರುಸದನದಲ್ಲಿ ನಡೆದ ಎರಡು ದಿನಗಳ ಕೇರಳ ಮರಾಟಿ ಶಾರದೋತ್ಸವ ಸಮಿತಿಯ ಶಾರದೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷೆ ಕಮಲ ಪೆರಡಾಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಜೀವವಿಮಾ ನಿಗಮದ ಮಂಗಳೂರು ಹೌಸಿಂಗ್ ಫೈನಾನ್ಸ್ನ  ವಿಭಾಗೀಯ ಪ್ರಬಂಧಕ ಸತೀಶ್ ಕುಮಾರ್ ಸಮಾರಂಭವನ್ನುದ್ದೇಶಿಸಿ ಮಾತನಾಡಿ ನಮ್ಮ ಆಚಾರಗಳು ಮೂಲಸ್ವರೂಪವನ್ನು ಕಳೆದುಕೊಳ್ಳಬಾರದು. ಧನಾತ್ಮಕ ಚಿಂತನೆಗಳತ್ತ ನಾವು ಹೆಚ್ಚು ಗಮನವನ್ನಿಡಬೇಕು ಎಂದರು. ಆದೂರು ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಿಕೆ ಸರಸ್ವತಿ ಅವರು ಶುಭಾಶಂಸನೆಗೈದರು.
ಇದೇ ಸಂದರ್ಭದಲ್ಲಿ ಪ್ರಸಿದ್ಧ ವೈದ್ಯ ಡಾ. ಕೇಶವ ನಾಯ್ಕ ಖಂಡಿಗೆ ಅವರನ್ನು ಸನ್ಮಾನಿಸಲಾಯಿತು. ಶಾರದೋತ್ಸವ ಸಮಿತಿಯ ಜೊತೆಕಾರ್ಯದಶರ್ಿ ಕು. ಪುಷ್ಪ ಪೆರಡಾಲ ನಿರೂಪಣೆಗೈದರು. ಶಾರದೋತ್ಸವ ಸಮಿತಿಯ ಕಾರ್ಯದಶರ್ಿ ಜಯರಾಮ ನಾಯ್ಕ ಕುಂಟಾಲುಮೂಲೆ ಸ್ವಾಗತಿಸಿ, ಹೇಮಂತ್ ಬೋಳುಕಟ್ಟೆ ವಂದಿಸಿದರು. ಶಾರದಾ ದೇವಿಯ ವಿಗ್ರಹವನ್ನು ನೀಡಿದ ಕುಶಲ ಕುಮಾರ್ ನಲ್ಕ ಮತ್ತು ಮನೆಯವರನ್ನು ಗೌರವಿಸಲಾಯಿತು.
ಗುರುವಾರ ಕೇರಳ ಮರಾಟಿ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಮಹಿಷಮಧರ್ಿನಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತ್ತು. ಶುಕ್ರವಾರ ಬೆಳಿಗ್ಗೆ ವೇದಮೂತರ್ಿ ವೆಂಕಟೇಶ್ವರ ಭಟ್ ಪಟ್ಟಾಜೆ ವಿದ್ಯಾರಂಭ, ಶಾರದಾ ಪೂಜೆ ನಡೆಸಿಕೊಟ್ಟರು. ಚೆಂಡೆಮೇಳ, ವಾದ್ಯಮೇಳ ಹಾಗೂ ಲಲಿತಾಸಹಸ್ರನಾಮ ಜಪದೊಂದಿಗೆ ಶೋಭಾಯತ್ರೆ ಬದಿಯಡ್ಕ ಪೇಟೆಯಲ್ಲಿ ಸಾಗಿ ಪೆರಡಾಲ ವರದಾ ನದಿಯಲ್ಲಿ ವಿಗ್ರಹ ಜಲಸ್ಥಂಭನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries