HEALTH TIPS

ಯಾವುದೇ ಶೀರ್ಷಿಕೆಯಿಲ್ಲ

 ನಮ್ಮ ನಡೆ ನುಡಿಗಳಲ್ಲಿ ಹೊಂದಾಣಿಕೆ ಇದ್ದು ಇತರರಿಗೆ ಮಾದರಿಯಾಗಬೇಕು-ಮಾಧವ ಕಾರಂತ
    ಕುಂಬಳೆ: ನಮ್ಮ ಪರಂಪರೆ, ಆಚಾರ ವಿಚಾರ, ಘನತೆಗಳನ್ನು ಅಥ್ರ್ಯಯಿಸಿ ಬಾಳಬೇಕು ಎಂದು ಹಿರಿಯ ಧಾಮರ್ಿಕ ಮುಂದಾಳು ಮಾಧವ ಕಾರಂತ ಎಡನಾಡು ಅವರು ಅಭಿಪ್ರಾಯಪಟ್ಟರು. ನಮ್ಮ ನಡೆ-ನುಡಿಗಳಲ್ಲಿ ಹೊಂದಾಣಿಕೆಯಿದ್ದು, ಅದು ಇತರರಿಗೆ ಮಾದರಿಯಾಗಿರಬೇಕೆಂದೂ ಅವರು ಕಿವಿ ಮಾತು ಹೇಳಿದರು,
    ಕೂಟಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ 148 ನೇ ಸಂಪರ್ಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
   ಸಭೆಯ ಅಧ್ಯಕ್ಷತೆಯನ್ನು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅವರು ವಹಿಸಿದ್ದರು. ಸಾಲಿಗ್ರಾಮ ದೇಗುಲದ ನಿಕಟಪೂರ್ವ ಅಧ್ಯಕ್ಷ ನೀರಾಳ ಕೃಷ್ಣ ಹೊಳ್ಳ, ಸಮಾಜದ ಹಿರಿಯರಾದ ರಾಮ ಹೊಳ್ಳ, ಅಂಗಸಂಸ್ಥೆಯ ಪ್ರಧಾನ ಕಾರ್ಯದಶರ್ಿ ನರಸಿಂಹ ಮಯ್ಯ ಮಧೂರು ಮುಂತಾದವರು ಉಪಸ್ಥಿತರಿದ್ದರು.
    ಕೇಂದ್ರ ಸಂಸ್ಥೆಯ ಸಹಾಯ ನಿಧಿಯಾದ ಶ್ರೀ ಗುರು ನರಸಿಂಹ ಬಿಲಿಯನ್ ಫೌಂಡೇಶನ್ ವತಿಯಿಂದ ನೀಡಲಾಗುವ ವಿದ್ಯಾ ಸಹಾಯಧನವನ್ನು ಪ್ರತಿಭಾವಂತ ವಿದ್ಯಾಥರ್ಿಗಳಾದ ಕೃಷ್ಣಮೋಹನ ಬಿ.ಕಜಳ, ವಿಘ್ನೇಶ್ ಹೊಳ್ಳ ಪರಕ್ಕಿಲ ಹಾಗು ಸ್ವಾತಿ ನಾವಡ ಪಂದಪ್ಪಿಲ ಅವರಿಗೆ ಅತಿಥಿ ಗಣ್ಯರು ವಿತರಿಸಿದರು.
    ಅಂಗಸಂಸ್ಥೆಯ 150 ನೇ ಸಂಪರ್ಕ ಸಭೆ ಹಾಗು ಭಜನಾ ಕಾರ್ಯಕ್ರಮ ಡಿ.9 ರಂದು ಮಧೂರಿಗೆ ಸಮೀಪದ ಎಲ್ಲಂಗಳದ ವಾಸುದೇವ ಹೊಳ್ಳ ಅವರಲ್ಲಿ ಜರಗಲಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ವಿನಂತಿಸಲಾಯಿತು.
    ಇತ್ತೀಚೆಗೆ ನಿಧನರಾದ ಮಧೂರಿನ ಗೋಪಾಲಕೃಷ್ಣ ಮಯ್ಯ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಮುಂದಿನ ಸಂಪರ್ಕ ಸಭೆಯನ್ನು ನ.4 ರಂದು ಪುತ್ತಿಗೆಯ ಎಂ.ನರಸಿಂಹರಾಜ ಮಾಸ್ಟರ್ ಅವರ ಮನೆಯಲ್ಲಿ ನಡೆಸಲು ತೀಮರ್ಾನಿಸಲಾಯಿತು. ಅವಿನಾಶ್ ಕಾರಂತ ಸ್ವಾಗತಿಸಿ, ಬಿ.ಕೃಷ್ಣ ಕಾರಂತ ವಂದಿಸಿದರು. ಕೃಷ್ಣ ಪ್ರಸಾದ ಅಡಿಗ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries