ಇಂದು ಚುಕ್ಕಿನಡ್ಕದಲ್ಲಿ 24ನೇ ವಾರ್ಷಿಕೋತ್ಸವ
0
ಡಿಸೆಂಬರ್ 21, 2018
ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಚುಕ್ಕಿನಡ್ಕದ ಶ್ರೀಅಯ್ಯಪ್ಪ ಸೇವಾ ಸಂಘದ 24ನೇ ವಾರ್ಷಿಕೋತ್ಸವವು ಇಂದು(ಶನಿವಾರ) ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಚುಕ್ಕಿನಡ್ಕ ಶ್ರೀಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 5ಕ್ಕೆ ದೀಪ ಪ್ರತಿಷ್ಠೆ, ಶರಣಂ ವಿಳಿ, ಗಣಪತಿ ಹವನ, 9 ರಿಂದ ಚುಕ್ಕಿನಡ್ಕ ಅಯ್ಯಪ್ಪ ಸೇವಾ ಸಂಘದವರಿಂದ ಭಜನಾ ಸಂಕೀರ್ತನೆ, 10 ರಿಂದ ಆಟ್ರ್ಸ್ ಓಫ್ ಲಿವಿಂಗ್ ಬದಿಯಡ್ಕ ಘಟಕದ ತಂಡದಿಂದ ಭಜನಾ ಸಂಕೀರ್ತನೆ, 11 ರಿಂದ ಮಾನ್ಯ ಲಕ್ಷ್ಮೀ ವೆಂಕಟರಮಣ ಭಜನಾ ತಂಡದಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಶರಣಂ ವಿಳಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ, ಸಂಜೆ5 ರಿಂದ ನೀಲೇಶ್ವರದ ಗಂಗಾಧರ ಮಾರಾರ್ ತಂಡದವರಿಂದ ತಾಯಂಬಕ, 6.30 ರಿಂದ ಮಾನ್ಯ ಶ್ರಿಅಯ್ಯಪ್ಪ ಭಜನಾ ಮಂದಿರಕ್ಕೆ ಉಲ್ಪೆ ಮೆರವಣಿಗೆ, 7 ರಿಂದ ಮುಂಡೋಡು ಮೂಕಾಂಬಿಕಾ ಭಜನಾ ತಂಡದವರಿಂದ ಭಜನಾ ಸಂಕೀರ್ತನೆ, ರಾತ್ರಿ 8ಕ್ಕೆ ನೆಕ್ರಾಜೆ ಶ್ರೀಗೋಪಾಲಕೃಷ್ಣ ಭಜನಾ ತಮಡದಿಂದ ಭಜನಾ ಸಂಕೀರ್ತನೆ, 9.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.ಬಳಿಕ 10 ರಿಂದ ಮಲ್ಲ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಶಾಂಭವೀ ವಿಲಾಸ, ವಾವರ ಮೋಕ್ಷ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.

