HEALTH TIPS

ಮಕ್ಕಳ ಕವಿಗೋಷ್ಠಿ ಮತ್ತು ಕಥಾಗೋಷ್ಠಿ

ಬದಿಯಡ್ಕ: ಕಾಸರಗೋಡು ಜಿಲ್ಲಾ 12ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಕ್ಕಳ ಕವಿಗೋಷ್ಠಿ ಮತ್ತು ಕಥಾಗೋಷ್ಠಿಯನ್ನು ವಿಶೇಷವಾಗಿ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ 17 ವರ್ಷಕ್ಕಿಂತ ಕೆಳಗಿನ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಮಕ್ಕಳು ಸ್ವರಚಿತ ಕನ್ನಡ ಕವನ/ಕಥೆಯನ್ನು ಕಳುಹಿಸಿಕೊಡಲು ಕೋರಲಾಗಿದೆ. ಕವನವು 24 ಸಾಲುಗಳಿಗೆ ಮೀರದಂತೆ/ ಕಥೆಯು 2ಪುಟಗಳಿಗೆ ಮೀರದಂತೆ ಇರಬೇಕು, ಒಬ್ಬರು ಯಾವುದಾದರೂ ಒಂದು ವಿಭಾಗಕ್ಕೆ ಮಾತ್ರ ಕೃತಿಯನ್ನು ಕಳುಹಿಸಿಕೊಡಬಹುದಾಗಿದ್ದು, ಆಯ್ಕೆಯಾದವರಿಗೆ ತಿಳಿಸಲಾಗುವುದು. ಕೃತಿಗಳನ್ನು ಡಿ.26ರ ಬುಧವಾರದ ಮುಂಚಿತವಾಗಿ ಖಾಯಂ ವಿಳಾಸ ಮತ್ತು ರಕ್ಷಕರ ಮೊಬೈಲ್ ಸಂಖ್ಯೆಯೊಂದಿಗೆ ಪಿ ರಾಮಚಂದ್ರ ಭಟ್ ಗೌರವ ಕಾರ್ಯದರ್ಶಿ,ಕ ಸಾ ಪ ಕೇರಳ ಗಡಿನಾಡ ಘಟಕ,ಅಂಚೆ ಧರ್ಮತ್ತಡ್ಕ (ವಯ)ಮಂಗಲ್ಪಾಡಿ 671324 ಮೊ.ಸಂ. 9446737968, ಅಥವಾ ಮಿಂಚಂಚೆ-pramachandrabhat2015@gmail,com ಇವರಿಗೆ ಕಳುಹಿಸಿಕೊಡಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries