ಸಾಂತಾಕ್ಲಾಸ್‍ನ ನೋಡಿ ಸಂಭ್ರಮಿಸಿದ ಚಿಣ್ಣರು
0
ಡಿಸೆಂಬರ್ 21, 2018
ಮುಳ್ಳೇರಿಯ: ರಾಜ್ಯಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆ ಕೊನೆಗೊಂಡಿದ್ದು, ಶುಕ್ರವಾರ ಸಂಭ್ರಮ ಸಡಗರದ ಕ್ರಿಸ್‍ಮಸ್ ಆಚರಣೆ ನಡೆಯಿತು.
ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಸಾಂತಾಕ್ಲಾಸ್ ವಿಶೇಷ ಸಂದರ್ಶನ ನಡೆಯಿತು. ಶಾಂತಿ, ಸೌಹಾರ್ಧತೆಯ ಸಂದೇಶಗಳೊಂದಿಗೆ ಸಾಂತಾಕ್ಲಾಸ್ ತನ್ನ ಎಂದಿನ ತಮಾಷೆ-ಹಾಸ್ಯಗಳಿಂದ ಶಾಲಾ ಕಿರಿಯ-ಹಿರಿಯ ವಿದ್ಯಾರ್ಥಿಗಳ ಖಷಿಗೆ ಕಾರಣವಾಯಿತು. ಶಾಲಾ ಆಂಗ್ಲ ಭಾಷಾ ಕ್ಲಬ್ ನೇತೃತ್ವದಲ್ಲಿ ಕ್ರಿಸ್‍ಮಸ್ ಆಚರಣೆ ನಡೆಸಲಾಯಿತು. ಮುಖ್ಯೋಪಾಧ್ಯಾಯಿನಿ ಎಂ.ಎ.ಲಕ್ಷ್ಮೀ, ಶಿಕ್ಷಕರಾದ ವಿ.ಹಾಶೀಂ, ಕೆ.ಶಾಂತಕುಮಾರಿ, ಸಿ.ಕೆ.ಶ್ರೀಪ್ರಿಯಾ, ಬಿಜೋಯ್ ಸೇವಿಯರ್, ಕೆ.ಎಲ್.ಪ್ರೀತಾ ಮೊದಲಾದವರು ನೇತೃತ್ವ ವಹಿಸಿದ್ದರು.

