ಶಿಶುಮಂದಿರ ಲೋಕಾರ್ಪಣೆ, ಮೇಧಾ ಸರಸ್ವತಿ ಯಾಗ ಡಿ.27ರಿಂದ
0
ಡಿಸೆಂಬರ್ 22, 2018
ಮುಳ್ಳೇರಿಯ : ದೇಲಂಪಾಡಿ ಗ್ರಾಮ ಪಂಚಾಯಿತಿನ ಅಡೂರಿನ ವಿದ್ಯಾಭಾರತಿ ವಿದ್ಯಾಲಯದ ಶಿಶುಮಂದಿರ ಲೋಕಾರ್ಪಣೆ ಹಾಗೂ ಮೇಧಾ ಸರಸ್ವತಿ ಯಾಗವು ಡಿ.27 ಹಾಗೂ ಡಿ. 28ರಂದು ಅಡೂರಿನ ವಿದ್ಯಾಭಾರತೀ ವಿದ್ಯಾಲಯದ ಪರಿಸರದಲ್ಲಿ ಜರುಗಲಿದೆ. ಡಿ.27ರಂದು ಬೆಳಗ್ಗೆ 10ಕ್ಕೆ ಅಡೂರು ಮಹಾದ್ವಾರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹಾಗೂ ಅಪರಾಹ್ನ 3ರಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈವಿದ್ಯ ನಡೆಯಲಿದೆ. ಸಂಜೆ 6ರಿಂದ ಸುಳ್ಯದ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ನೇತೃತ್ವದಲ್ಲಿ ರಕ್ಷೋಘ್ನ ಹೋಮ, ವಾಸ್ತು ಹೋಮ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಡಿ.28ರಂದು ಬೆಳಗ್ಗೆ 7ರಿಂದ ಮೇಧಾ ಸರಸ್ವತಿ ಯಾಗ ಆರಂಭವಾಗಲಿದೆ. ಬೆಳಗ್ಗೆ 11ಕ್ಕೆ ಶಿಶುಮಂದಿರದ ಲೋಕಾರ್ಪಣೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಡಿ ವೆಂಕಟ್ರಾಜ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಭಾರತೀಯ ವಿದ್ಯಾನಿಕೇತನ್ ಜಿಲ್ಲಾ ಅಧ್ಯಕ್ಷ ಶಿವಶಂಕರನ್, ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಕೆ ರಂಗನಾಥ ಶಣೈ, ಉಪ್ಪಿನಂಗಡಿ ಶ್ರೀರಾಮ ಪೌಢಶಾಲೆಯ ಸಂಚಾಲಕ ಯು ಜಿ ರಾಧ, ಜಾಲ್ಸೂರು ವಿವೇಕಾನಂದ ವಿದ್ಯಾ ಸಂಸ್ಥೆಗಳ ಸಂಚಾಲಕ ಸುಧಾಕರ ಕಾಮತ್, ಪಿ ರಾಮಚಂದ್ರ ಸುಳ್ಯ ಭಾಗವಹಿಸುವರು. ಸಂಜೆ 3ರಿಂದ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ ಗಾನ-ನೃತ್ಯ ಸಂಗಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಾಗ ಸಮಿತಿ ಅಧ್ಯಕ್ಷ ಗಂಗಾಧರ ರಾವ್ ಕಾಂತಡ್ಕ, ಮುಖಂಡರಾದ ಪ್ರದೀಪ ಕುಮಾರ್ ಬಳ್ಳಕ್ಕಾನ, ಪ್ರೇಮಾ ಎಂ ಭಾರಿತ್ತಾಯ, ಸುಧಿರಾಜ್, ಬಾಲಸುಬ್ರಹ್ಮಣ್ಯ ಭಟ್ ಬೈತನಡ್ಕ, ಶಾರದಾದೇವಿ ಮೊದಲಾದವರು ಭಾಗವಹಿಸಲಿದ್ದಾರೆ.


