ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ನೀರಾವರಿ ಸೌಕರ್ಯಗಳಿಗೆ ಆದ್ಯತೆ:ಜಿ.ಪಂ.ಅಧ್ಯಕ್ಷ ಎ.ಜಿ.ಸಿ ಬಶೀರ್
0
ಡಿಸೆಂಬರ್ 19, 2018
ಎಣ್ಮಕಜೆ:೧೩ನೇ ಪಂಚವಾರ್ಷಿಕ ಯೋಜನೆ ಅಭಿವೃದ್ಧಿ ವಿಚಾರಗೋಷ್ಠಿ
ಪೆರ್ಲ:ಎಣ್ಮಕಜೆ ಗ್ರಾ.ಪಂ.೧೩ನೇ ಪಂಚ ವಾರ್ಷಿಕ ಯೋಜನೆ ೨೦೧೯-೨೦ನೇ ವಾರ್ಷಿಕ ಯೋಜನೆಯ ಅಭಿವೃಧ್ಧಿ ವಿಚಾರಗೋಷ್ಠಿ ಮಂಗಳವಾರ ನಡೆಯಿತು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಬಹುತೇಕ ಕೃಷಿ ಪ್ರದೇಶಗಳಿಂದ ಕೂಡಿರುವ ಹಾಗೂ ಆರ್ಥಿಕ ಮೂಲವಾಗಿ ಕೃಷಿ ಉತ್ಪನ್ನಗಳನ್ನೆÃ ಅವಲಂಬಿಸಿರುವ ಎಣ್ಮಕಜೆಯಲ್ಲಿ ಕೃಷಿ ಅಭಿವೃದ್ಧಿ ಹಾಗೂ ನೀರಾವರಿ ಸೌಕರ್ಯಗಳಿಗೆ ಆದ್ಯತೆ ನೀಡಿ ಕಿರು ಅಣೆಕಟ್ಟು ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗುವುದು. ಕೃಷಿ ಸಮೃದ್ಧ ಭೂಮಿಯಾಗಿ ಪಂಚಾಯಿತಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನದತ್ತ ಮುನ್ನುಗ್ಗಬೇಕು. ಪರಿಸರ ಸ್ವಚ್ಛತೆ, ಕುಡಿ ನೀರು ಸೌಲಭ್ಯಗಳಿಗೆ ಒತ್ತು ನೀಡುವುದರೊಂದಿಗೆ, ತ್ರಿಸ್ತರ ಪಂಚಾಯಿತಿ ಅನುದಾನದೊಂದಿಗೆ ನೂತನ ಬಡ್ಸ್ ಶಾಲಾ ಕಟ್ಟಡ ಹಾಗೂ ಈ ಹಿಂದೆ ಶಿಲಾನ್ಯಾಸ ನಡೆಸಲಾಗಿದ್ದ ಬಹು ನಿರೀಕ್ಷಿತ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಬೇಕಾದ ಶ್ರಮ ನಡೆಸಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ವೈ. ಅಧ್ಯಕ್ಷತೆ ವಹಿಸಿದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಯೋಜನೆಗಳ ಮಾಹಿತಿ ನೀಡಿದರು.ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಪಂಚಾಯಿತಿ ಸದಸ್ಯೆ ರೂಪವಾಣಿ ಆರ್.ಭಟ್, ನಿರ್ವಹಣಾ ಉದ್ಯೊÃಗಿಗಳು, ಸಿಬ್ಬಂದಿಗಳು, ಶುಭ ಹಾರೈಸಿದರು.ಪಂಚಾಯಿತಿ ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ., ಬ್ಲಾಕ್ ಪಂಚಾಯಿತಿ ಸದಸ್ಯೆ ಸಫ್ರೀನಾ, ಪಂಚಾಯಿತಿ ಸದಸ್ಯರುಗಳು, ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯಿತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಸ್ವಾಗತಿಸಿ,ಪಂಚಾಯಿತಿ ಸಹ ಕಾರ್ಯದರ್ಶಿ ಅಬ್ದುಲ್ ಲತೀಫ್ ವಂದಿಸಿದರು.


