ವಿಕ್ರಂ ಫ್ರೆಂಡ್ಸ್ ಕ್ಲಬ್ ಉದ್ಘಾಟನೆ ೨೨ ರಂದು
0
ಡಿಸೆಂಬರ್ 19, 2018
ಕುಂಬಳೆ: ಬಂಬ್ರಾಣ ತಿಲಕನಗರದಲ್ಲಿ ಕಳೆದ ೫೦ ವರ್ಷಗಳಿಂದ ಸಕ್ರಿಯ ಸಮಾಜ ಸೇವೆ, ಸಾಂಸ್ಕೃತಿಕ, ಸಾಮಾಜಿಕ, ಕ್ರಿÃಡಾ ಕ್ಷೆÃತ್ರಗಳಲ್ಲಿ ಅಪರಿಮಿತವಾದ ಸೇವೆಗಳ ಮೂಲಕ ಜನಾನುರಾಗಿಯಾಗಿರುವ ವಿಕ್ರಂ ಫ್ರೆಂಡ್ಸ್ ಕ್ಲಬ್ ನ ನೂತನ ನವೀಕೃತ ಕಟ್ಟಡದ ಉದ್ಘಾಟನೆ ವಿವಿಧ ಕಾರ್ಯಕ್ರಮಗಳೊಂದಿಗೆ ಡಿ.೨೨ ಹಾಗೂ ೨೩ ರಂದು ನಡೆಯಲಿ ಎಂದು ಕ್ಲಬ್ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.೨೨ ರಂದು ಬೆಳಿಗ್ಗೆ ಗಣಪತಿಹೋಮ, ೯ ರಿಂದ ಬ್ರಹ್ಮಶ್ರಿÃ ಚಕ್ರಪಾಣಿ ದೇವ ಪೂಜಿತ್ತಾಯರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ, ೧೦.೩೦ಕ್ಕೆ ಕಟ್ಟಡದ ಉದ್ಘಾಟನೆ ನಡೆಯಲಿದೆ. ಮಾಣಿಲ ಶ್ರಿÃಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಕಟ್ಟಡ ಲೋಕಾರ್ಪಣೆಗೊಳಿಸುವರು. ಕ್ಲಬ್ ಅಧ್ಯಕ್ಷ ನಾಗೇಶ್ ಆಚಾರ್ಯ ಅಧ್ಯಕ್ಷತೆ ವಹಿಸುವರು. ಶ್ರಿÃಕ್ಷೆÃತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿ ಜಯರಾಮ ನೆಲ್ಲಿತ್ತಾಯ, ರಾ.ಸ್ವಯಂ ಸೇವಕ ಸಂಘದ ಗೋಪಾಲ ಚೆಟ್ಟಿಯಾರ್, ದಾಮೋದರ ದೇಲಂಪಾಡಿ, ಪಿ.ಮುರಳೀಧರನ್, ಶ್ರಿÃಧರ ಶೆಟ್ಟಿ ಮುಟ್ಟ, ದಿನೇಶ್ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿರುವರು. ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ. ಡಿ.೨೩ ರಂದು ಆಯ್ದತಂಡಗಳ ಕಬ್ದಡಿ ಪಂದ್ಯಾಟ ನಡೆಯಲಿದೆ. ಸಂಜೆ೪ಕ್ಕೆನಡೆಯಲಿರುವ ಸಮಾರೋಪ ಸಮಾರಂದಲ್ಲಿ ಉಜಾರು ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕುಂಬಳೆಠಾಣಾಧಿಕಾರಿ ಪಿ.ವಿ.ಅಶೋಕನ್ ಬಹುಮಾನ ವಿತರಿಸುವರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ನಾಗೇಶ್ ಆಚಾರ್ಯ, ಕಾರ್ಯದರ್ಶಿ ಹರೀಶ್ ಆಳ್ವ, ಲೋಕನಾಥ ಶೆಟ್ಟಿ, ಬಿ.ಸುಬ್ಬಣ್ಣ, ಭುವನೇಶ ಆಚಾರ್ಯ ಹರೀಶ್ ಆಳ್ವ ಉಪಸ್ಥಿತರಿದ್ದು ಮಾಹಿತಿ ನೀಡಿದರು.


