ಜಿಲ್ಲಾಡಳಿತೆಯಿಂದ ನೂತನ ವರ್ಷಾಚರಣೆ
0
ಡಿಸೆಂಬರ್ 19, 2018
ಕಾಸರಗೋಡು: ಜಿಲ್ಲಾಡಳಿತೆ ಆಶ್ರಯದಲ್ಲಿ ಕಾಸರಗೋಡಿನಲ್ಲಿ ನೂತನ ವರ್ಷಾಚರಣೆ ನಡೆಯಲಿದೆ.
"ಕಾಸರಗೋಡು ಒಪ್ಪರಂ' ಎಂಬ ಹೆಸರಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಸಮಾರಂಭ ನಡೆಯಲಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಇತ್ತೀಚೆಗೆ ರಚನೆಗೊಂಡಿರುವ ಥಿಯೇಟರಿಕಲ್ ಸೊಸೈಟಿಯ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ. ಡಿ.೩೧ರಂದು ಸಂಜೆ ಆರಂಭಗೊಂಡು, ಹೊಸ ವರ್ಷ ಆರಂಭಗೊಳ್ಳುವ ವರೆಗೆ ಪಿಲಿಕುಂಜೆ ಸಂಧ್ಯಾರಾಗಂ ಮುಕ್ತಸಭಾಂಗಣದಲ್ಲಿ ಆಚರಣೆ ನಡೆಯಲಿದೆ. ರಂಗಪೂಜೆ, ಯಕ್ಷಗಾನ, ಕೊರಗ ನೃತ್ಯ, ಕೋಲಾಟ, ಪೂರಂ ಕುಣಿತ, ಮಾರ್ಗಂ ನೃತ್ಯ, ಮಂಗಲಂ ಕುಣಿತ, ಒಪ್ಪನ, ಆಲಾಮಿ ಕುಣಿತ, ಅಮತನ್ ತಂಡದಿಂದ ರಸಮಂಜರಿ ಇತ್ಯಾದಿ ಕಾರ್ಯಮಗಳು ನಡೆಯಲಿವೆ. ಪಾಸ್ ಮುಖಾಂತರ ಪ್ರವೇಶಾತಿ ರುವುದು. ಕಾರ್ಯಕ್ರಮ ಅಂಗವಾಗಿ ವರ್ಣರಂಜಿತ ಮೆರವಣಿಗೆ ನಡೆಯಲಿದೆ.
ಸಮಾರಂಭ ಅಂಗವಾಗಿ ಪಿಲಿಕುಂಜೆಯಲ್ಲಿ ಡಿ.೨೯ರಿಂದ ಜನವರಿ ೨ ವರೆಗೆ ಕುಟುಂಬಶ್ರೀ ವತಿಯಿಮದ ಆಹಾರ ಮೇಳ ನಡೆಯಲಿದೆ.


