ಎಣ್ಮಕಜೆಯಲ್ಲಿ ಇಕೋ ಶಾಪ್ ಮಾರಾಟ ವಿತರಣಾ ಕೇಂದ್ರ ಆರಂಭ
0
ಡಿಸೆಂಬರ್ 19, 2018
ಪೆರ್ಲ:ಕೃಷಿ ಅಭಿವೃದ್ಧಿ ಕೃಷಿಕರ ಕ್ಷೇಮ ಇಲಾಖೆ, ಎಣ್ಮಕಜೆ ಗ್ರಾ.ಪಂ.ಸಂಯುಕ್ತ ಆಶ್ರಯದಲ್ಲಿ ಪಂಚಾಯಿತಿಯ ಸಮೀಪದ ಜೈವ ತರಕಾರಿ, ಹಣ್ಣು ಹಂಪಲುಗಳನ್ನು ವಿತರಿಸುವ ಇಕೋ ಶಾಪ್ ಮಾರಾಟ ಕೇಂದ್ರ ಮಂಗಳವಾರ ಉದ್ಘಾಟನೆ ಗೊಂಡಿತು.
ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಉದ್ಘಾಟಿಸಿ ಮಾತನಾಡಿ, ಕೃಷಿ ಪ್ರದೇಶಗಳಲ್ಲಿ ವ್ಯಾಪಕವಾಗಿ ನಿಷೇಧಿತ ಕೀಟ ನಾಶಕಗಳನ್ನು ಬಳಸಲಾಗುತ್ತಿದೆ. ದುಬಾರಿ ಹಣ ಕೊಟ್ಟು ವಿಷ ವಸ್ತುಗಳನ್ನು ಖರೀದಿಸುವ ಪರಿಸ್ಥಿತಿ ನಮ್ಮದಾಗಿದೆ. ಕಾಸರಗೋಡನ್ನು ಜೈವ ಜಿಲ್ಲೆಯನ್ನಾಗಿ ಘೋಷಿಸಲಾಗಿದ್ದು ಕೃಷಿ ಇಲಾಖೆ ನಾನಾ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜೈವ ಕೃಷಿಯನ್ನು ಪ್ರೊÃತ್ಸಾಹಿಸುತ್ತಿದೆ. ಇಕೋ ಮಾರುಕಟ್ಟೆ ಇದರ ಭಾಗವಾಗಿದ್ದು ನ್ಯಾಯಯುತ ಬೆಲೆಗೆ ಉತ್ಪನ್ನಗಳು ಸಿಗುವುದಲ್ಲದೆ ಹೊರ ರಾಜ್ಯಗಳಿಂದ ಬರುವ ವಿಷಯುಕ್ತ ತರಕಾರಿಗಳಿಗೆ ನಿಯಂತ್ರಣ ಬೀಳಲಿದೆ. ಸ್ಥಳೀಯ ಕೃಷಿ ವಲಯ ಹಾಗೂ ಕೃಷಿಕರಿಗೆ ಪ್ರೋತ್ಸಾಹ ದೊರಕುವುದಲ್ಲದೆ ವಿಷಯುಕ್ತ ತರಕಾರಿ ಖರೀದಿಯಿಂದ ಮುಕ್ತಿ ಸಿಗಲಿದೆ ಎಂದರು.
ಗ್ರಾ.ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ಕೃಷಿ ಅಧಿಕಾರಿ ನಂಬೀಶನ್ ವಿಜಯೇಶ್ವರಿ ಯೋಜನೆಯ ಮಾಹಿತಿ ನೀಡಿದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ., ಬ್ಲಾಕ್ ಪಂಚಾಯಿತಿ ಸದಸ್ಯೆ ಸಫ್ರೀನಾ ಅಡ್ಕಸ್ಥಳ,
ಪಂಚಾಯಿತಿ ಸದಸ್ಯ ಹನೀಫ್ ನಡುಬೈಲ್, ಸಿದ್ದಿಕ್ ವಳಮೊಗರು, ಐತಪ್ಪ ಕುಲಾಲ್, ಕೃಷಿ ಮಾರುಕಟ್ಟೆ ಉಪ ನಿರ್ದೇಶಕಿ ಡೆಸ್ಸಿ ವರ್ಗೀಸ್, ಕೃಷಿ ಅಧಿಕಾರಿ ವಿನೀತ್ ವಿ.ವರ್ಮ, ಇಕೋ ಶಾಪ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಮಹಮ್ಮದಲಿ ಪೆರ್ಲ, ಬಿ.ಎಸ್. ಗಾಂಭೀರ ಮತ್ತಿತರರು ಉಪಸ್ಥಿತರಿದ್ದರು.


