ವಾಣೀನಗರ:ನಾಲಂದ ಎನ್ನೆಸ್ಸೆಸ್ ಸಪ್ತದಿನ ಶಿಬಿರ ಇಂದು ಆರಂಭ
0
ಡಿಸೆಂಬರ್ 20, 2018
ಪೆರ್ಲ:ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್ನೆಸೆಸ್ ಘಟಕ 49ರ ವಿಶೇಷ ಸಪ್ತದಿನ ಶಿಬಿರ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಡಿ.21ರಂದು ಆರಂಭವಾಗಲಿದ್ದು 27ರ ತನಕ ನಡೆಯಲಿದೆ.
ಇಂದು ಮಧ್ಯಾಹ್ನ 2ಗಂಟೆಗೆ ಶಿಬಿರಾರ್ಥಿಗಳ ನೊಂದಣಿ, ವಾಣೀನಗರ ಶಾಲಾ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ. ಶಿಬಿರವನ್ನು ಉದ್ಘಾಟಿಸುವರು.
ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಅಧ್ಯಕ್ಷತೆ ವಹಿಸಿದರು. ನಾಲಂದ ಮಹಾವಿದ್ಯಾಲಯ ಪ್ರಿನ್ಸಿಪಾಲ್ ಡಾ.ವಿಘ್ನೇಶ್ವರ ವರ್ಮುಡಿ ಪ್ರಧಾನ ಭಾಷಣ ಮಾಡುವರು. ಪಂಚಾಯಿತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ., ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಪಂಚಾಯಿತಿ ಸದಸ್ಯರಾದ ಶಶಿಕಲಾ ವೈ., ಉದಯ ಚೆಟ್ಟಿಯಾರ್ ಬಜಕೂಡ್ಲು, ವಾಣಿನಗರ ಶಾಲಾ ಪ್ರಿನ್ಸಿಪಾಲ್ ಗೀತಾ ಜಿ. ತೋಪಿಲ್, ಮುಖ್ಯ ಶಿಕ್ಷಕ ವಸುದೇವ ನಾಯಕ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನರಸಿಂಹ ಪೂಜಾರಿ, ನಾಲಂದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಬಾಲಚಂದ್ರನ್, ಯೋಜನಾಧಿಕಾರಿ ಸುರೇಶ್ ಕೆ.ಎಂ. ಕಾಲೇಜು ಯೂನಿಯನ್ ಅಧ್ಯಕ್ಷೆ ನಯನಶ್ರೀ, ಎನ್ನೆಸ್ಸೆಸ್ ಮಾಜಿ ಕಾರ್ಯದರ್ಶಿ ಪ್ರದೀಪ್ ಮತ್ತಿತರರು ಉಪಸ್ಥಿತರಿರುವರು.
ಸೇವಾ ಶಿಬಿರದ ಭಾಗವಾಗಿ ಏಳು ದಿನಗಳಲ್ಲಿ ವಾಣೀನಗರ ಪತ್ತಡ್ಕ ರಸ್ತೆ ದುರಸ್ತಿ, ಇಳಂತೋಡಿ ಬೈಲಮೂಲೆ ರಸ್ತೆ, ಅರಣ್ಯ, ಕಾಲೊನಿ ಸಂದರ್ಶನ, ಬಯಲು ಅಧ್ಯಯನ, ವ್ಯಕ್ತಿತ್ವ ವಿಕಸನ ತರಬೇತಿ, ಶೈಕ್ಷಣಿಕ ತರಗತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ತರಕಾರಿ ತೋಟ ಅಭಿವೃದ್ಧಿ ಮತ್ತುತರ ಚಟುವಟಿಕೆಗಳು ನಡೆಯಲಿದೆ.


