ಸೀನಿಯರ್ ಸಿಟಿಜನ್ ಪೋರಂ-ಪೂರ್ವಭಾವೀ ಸಭೆ
0
ಡಿಸೆಂಬರ್ 20, 2018
ಬದಿಯಡ್ಕ: ಕೇರಳ ಸೀನಿಯರ್ ಸಿಟಿಸನ್ ಫೋರಂನ ಕಾಸರಗೋಡು ಜಿಲ್ಲಾ ಸಮ್ಮೇಳನವು 2019 ಮಾರ್ಚ್ 14ರಂದು ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ನಡೆಯಲಿರುವುದು.
ಈ ನಿಟ್ಟಿನಲ್ಲಿ ಗುರುವಾರ ಬದಿಯಡ್ಕ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಅವರು ಮಾತನಾಡುತ್ತಾ ಗ್ರಾಮಪಂಚಾಯತ್‍ನ ಪ್ರತಿಯೊಂದು ಸವಲತ್ತುಗಳನ್ನು ನೀಡುವಾಗಲೂ ಹಿರಿಯ ನಾಗರಿಕರಿಗೆ ಮನ್ನಣೆಯನ್ನು ನೀಡಲಾಗುತ್ತದೆ. ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಲಿರುವ ಜಿಲ್ಲಾ ಸಮ್ಮೇಳನದ ಯಶಸ್ಸಿಗೆ ನಮ್ಮೆಲ್ಲರ ಸಹಕಾರವಿರುತ್ತದೆ ಎಂದು ತಿಳಿಸಿದರು.
ಕೇರಳ ಸೀನಿಯರ್ ಸಿಟಿಸನ್ ಫೋರಂನ ಜಿಲ್ಲಾ ಉಪಾಧ್ಯಕ್ಷ ಕೆ.ಜೆ.ಅಗಸ್ಟಿನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಮಾಹಿನ್ ಕೇಳೋಟ್, ಗ್ರಾಮಪಂಚಾಯತ್ ಸದಸ್ಯ ಶಂಕರ ಡಿ., ಕೇರಳ ಸೀನಿಯರ್ ಸಿಟಿಸನ್ ಫೋರಂನ ಬದಿಯಡ್ಕ ಯೂನಿಟ್ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್, ಹಿರಿಯರಾದ ಸುಬ್ರಹ್ಮಣ್ಯ ಭಟ್ ತಲೇಕ ಮಾತನಾಡಿದರು. ಗ್ರಾಮಪಂಚಾಯತ್ ಸದಸ್ಯರುಗಳಾದ ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ಶೆಟ್ಟಿ ಕಡಾರು, ಶಿವದಾಸ್, ಸೀತಾರಾಮ ಕುಂಜತ್ತಾಯ, ಬಾಬು ಮಾಸ್ತರ್ ಅಗಲ್ಪಾಡಿ, ಗಂಗಾಧರ ಮುಳ್ಳೇರಿಯ, ಪಿ.ಜಿ.ಚಂದ್ರಹಾಸ ರೈ, ಬಿ.ಪರಮೇಶ್ವರ, ಗಣೇಶ್ ಚೇರ್ಕೂಡ್ಲು ಹಾಗೂ ನೂರಾರು ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದರು. ಕೇರಳ ಸೀನಿಯರ್ ಸಿಟಿಸನ್ ಫೋರಂನ ಜಿಲ್ಲಾ ಕಾರ್ಯದರ್ಶಿ ಸುಕುಮಾರನ್ ನಾಯರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರಾಮಚಂದ್ರ ಭಟ್ ಉಪ್ಪಂಗಳ ಧನ್ಯವಾದವನ್ನಿತ್ತರು. ಜಿಲ್ಲಾ ಸಮ್ಮೇಳನವನ್ನು ನಡೆಸುವರೇ ನೂತನ ಸಮಿತಿಯನ್ನು ರೂಪಿಸಲಾಯಿತು.
ಏನಂತಾರೆ:
60 ವರ್ಷ ಮೀರಿದ ಎಲ್ಲಾ ನಾಗರಿಕರು ಕೇರಳ ಸೀನಿಯರ್ ಸಿಟಿಸನ್ ಫೋರಂನ ಸದಸ್ಯರಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬದಿಯಡ್ಕದಲ್ಲಿ ನಡೆಯುವ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿದೆ. -
ಸುಕುಮಾರನ್ ನಾಯರ್, ಜಿಲ್ಲಾ ಕಾರ್ಯದರ್ಶಿ

