ಇಂದಿನಿಂದ ಎನ್.ಎಸ್.ಎಸ್.ಶಿಬಿರ ಬೇಕೂರಿನಲ್ಲಿ ಆರಂಭ
0
ಡಿಸೆಂಬರ್ 20, 2018
ಉಪ್ಪಳ: ಮಂಜೇಶ್ವರದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಎನ್.ಎಸ್.ಎಸ್.ವಿಭಾಗ ಯೂನಿಟ್ ನಂಬ್ರ01 ರ ಎನ್.ಎಸ್.ಎಸ್. ವಿಶೇಷ ಶಿಬಿರ ಇಂದು(21) ಆರಂಭಗೊಂಡು ಡಿ.27 ವರೆಗೆ ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಶಿಬಿರವನ್ನು ಉದ್ಘಾಟಿಸುವರು. ಸದಸ್ಯ ಉಮೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿರುವರು. ಉಪ್ಪಳ ಪೇಟೆ, ಕರಾವಳಿ, ಶಾಲಾ ಆವರಣ ಇತ್ಯಾದಿ ಪ್ರದೇಶಗಳ ಶುಚೀಕರಣ, ಸಸಿ ನೆಡುವಿಕೆ ಇತ್ಯಾದಿ ಶಿಬಿರದ ಅಂಗವಾಗಿ ನಡೆಯಲಿವೆ.


