ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಉತ್ಸವ
0
ಡಿಸೆಂಬರ್ 13, 2018
ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಗುರುವಾರ ಸಂಪನ್ನಗೊಂಡಿತು. ಮುಂದಿನ ಕಿರುಷಷ್ಠಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಈ ಸಂದರ್ಭ ನಡೆಯಿತು. ಮೊಕ್ತೇಸರ ಗೌರಿ ಶಂಕರ ರೈ ಜೀರ್ಣೋದ್ದಾರ ಸಮಿತಿಯ ಮಹೇಶ್ ಪಡಿಯಡ್ಪು. ಕಜಳ ಉದಯ ಶಂಕರ ಭಟ್, ಪೆರ್ವ ಕೃಷ್ಣ ಭಟ್, ಮಹಿಳಾ ಸಮಿತಿಯ ಮೈನಾ ಜಿ ರೈ ಮೊದಲಾದವರು ಉಪಸ್ಥಿತರಿದ್ದರು. ಅರ್ಚಕ ರಾಮಕೃಷ್ಣ ಮಯ್ಯ ಪ್ರಾರ್ಥನೆಯ ಮೂಲಕ ಬಿಡುಗಡೆ ಮಾಡಿದರು.



