ಪ್ರಮುಖ ಸಹಕಾರಿಗಳ ಸಮ್ಮಾನ ಸಮಾರಂಭ
0
ಡಿಸೆಂಬರ್ 22, 2018
ಮಂಜೇಶ್ವರ: ಮಂಜೇಶ್ವರ ಸಹಕಾರಿ ಬ್ಯಾಂಕ್‍ನಲ್ಲಿ ಸತತವಾಗಿ 26 ವರ್ಷಗಳಲ್ಲಿ ಬ್ಯಾಂಕ್‍ನ ಆಡಳಿತ ಸಮಿತಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕಾಸರಗೋಡು ಜಿಲ್ಲಾ ವ್ಯವಸಾಯ ಕೇಂದ್ರದ ನಿವೃತ್ತ ಅಧಿಕಾರಿಯಾದ ಬಿ.ಎಂ.ಅನಂತ ಅವರಿಗೆ ಬ್ಯಾಂಕ್‍ನ ವತಿಯಿಂದ ಸಹಕಾರಿ ಇಲಾಖೆಯ ಜಿಲ್ಲಾ ಜಂಟಿ ರಿಜಿಸ್ಟ್ರಾರ್ ಮಹಮ್ಮದ್ ನೌಶಾದ್ ಹಾಗೂ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಬಿ.ವಿ.ರಾಜನ್ ಅವರಿಗೆ ಅಸಿಸ್ಟೆಂಟ್ ರಿಜಿಸ್ಟ್ರಾರ್(ಪ್ಲಾನಿಂಗ್) ಕೆ.ಮುರಳೀಧರ ಹಾಗು ಡಾ.ಕೆ.ಎ.ಖಾದರ್ ಅವರಿಗೆ ಅಸಿಸ್ಟೆಂಟ್ ರಿಜಿಸ್ಟ್ರಾರ್ ಜನರಲ್ ಕೆ.ರಾಜಗೋಪಾಲನ್ ಅವರು ಸಮ್ಮಾನಿಸಿದರು.
ಸಮಾರಂಭದಲ್ಲಿ ಸಹಕಾರಿ ಸಂಘ ಇನ್ಸ್‍ಪೆಕ್ಟರ್‍ಗಳಾದ ಸತೀಶನ್ ಕೆ.ಸಿ, ಸುನಿಲ್ ಕುಮಾರ್ ವಿ, ಬ್ಯಾಂಕ್‍ನ ಮಾಜಿ ನಿರ್ದೇಶಕರುಗಳಾದ ಕೆ.ಆರ್.ಜಯಾನಂದ, ಮುಹಮ್ಮದ್ ಪಿ.ಎಂ. ಹಾಗು ಪ್ರೇಮ ಅವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಯೋಗೀಶ್ ಕೆ. ಅಧ್ಯಕ್ಷತೆ ವಹಿಸಿದರು. ಬ್ಯಾಂಕ್‍ನ ಕಾರ್ಯದರ್ಶಿ ರಾಜನ್ ನಾಯರ್ ಸ್ವಾಗತಿಸಿ, ಚೀಫ್ ಅಕೌಂಟೆಂಟ್ ಕೃಷ್ಣಪ್ಪ ಅವರು ವಂದಿಸಿದರು.


