ಪೇಜಾವರ ಶ್ರೀಗಳಿಂದ ಸುತ್ತುಪೌಳಿ ಸಮರ್ಪಣಾ ದಿನ ನಿರ್ಣಯ
0
ಡಿಸೆಂಬರ್ 21, 2018
ಮಂಜೇಶ್ವರ: ಕಣ್ವತೀರ್ಥ ಶ್ರೀಬ್ರಹ್ಮೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಸುತ್ತು ಪೌಳಿಯನ್ನು ದೇವರಿಗೆ ಸಮರ್ಪಿಸುವ ಮತ್ತು ಕಲಶಾಭಿಷೇಕದ ದಿನಾಂಕ ನಿಗದಿಯನ್ನು ಇತ್ತೀಚೆಗೆ ಉಡುಪಿ ಪೇಜಾವರ ಅಧೋಕ್ಷಜ ಮಠದಲ್ಲಿ ಹಿರಿಯ ಯತಿವರ್ಯರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ನಿರ್ವಹಿಸಿದರು.
ಈ ಸಂದರ್ಭ ಶ್ರೀಬ್ರಹ್ಮೇಶ್ವರ ಕ್ಷೇತ್ರ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮುಖಂಡರಾದ ಸುಧಾಕರ ರಾವ್ ಪೇಜಾವರ, ಕೃಷ್ಣಪ್ಪ ಬೆಂಗರೆ, ಮಧುಸೂದನ ಆಚಾರ್ಯ, ಕಾರ್ಯದರ್ಶಿಗಳಾದ ಬಾಲಕೃಷ್ಣ ರಾಮಾಡಿ, ಕಿಶನ್ ಕುಮಾರ್, ಗೋಪಾಲ ಸಾಲ್ಯಾನ್, ಜನಾರ್ಧನ ದೊಡ್ಡಮನೆ, ಮಾಧವ ರಾಮಾಡಿ ಹಾಗೂ ಸಮಿತಿಯ ಸದಸ್ಯರು, ಊರ ಪ್ರಮುಖರು ಉಪಸ್ಥಿತರಿದ್ದರು.



