ಧರ್ಮದೈವ ಕ್ಷೇತ್ರದ ಮಹಾಸಭೆ-ಸಮಾರೋಪ
0
ಡಿಸೆಂಬರ್ 21, 2018
ಮುಳ್ಳೇರಿಯ: ಅಡೂರು ಸಮೀಪದ ಪಾಂಡಿ ಅಂಬಟ್ಟೆಮೂಲೆ ತರವಾಡು ಧರ್ಮದೈವ ಶ್ರೀಅಣ್ಣಪ್ಪ ಪಂಜುರ್ಲಿ ಪರಿವಾರ ದೈವಸ್ಥಾನದ ವಾರ್ಷಿಕ ಮಹಾಸಭೆ ಇತ್ತೀಚೆಗೆ ದೈವಕ್ಷೇತ್ರ ಪರಿಸರದಲ್ಲಿ ನಡೆಯಿತು.
ಅಪರಾಹ್ನ ನಡೆದ ಸಮಾರೋಪ ಸಮಾರಂಭವನ್ನು ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಮುಸ್ತಫಾ ಹಾಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ದೇಲಂಪಾಡಿ ಗ್ರಾ.ಪಂ. ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ರತನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯೆ ಉಷಾ ಬಯಲುಪಾಂಡಿ, ನಲಿಕೆಯವರ ಸಮಾಜ ಸೇವಾ ಸಂಘದ ಮಂಜೇಶ್ವರ ವಲಯ ಅಧ್ಯಕ್ಷ ಶ್ರೀಕೃಷ್ಣ ಸೋಮೇಶ್ವರ, ನಲಿಕೆಯವರ ಸಮಾಜ ಸೇವಾ ಸಂಘದ ಮಾಜೀ ವಲಯ ಅಧ್ಯಕ್ಷ ಗೋಪಾಲಕೃಷ್ಣ ಕಿಣ್ವಾಲ್, ನಲ್ಕೆದಾಯ ಸಮಾಜದ ಉದುಮ ವಲಯ ಅಧ್ಯಕ್ಷ ರಾಘವ ವೆಳ್ಳಿಕ್ಕೋತ್, ಭಾಸ್ಕರ ಅಂಬೆಟ್ಟೆಮೂಲೆ, ಲಕ್ಷ್ಮಣ ಪೋನಾರಂ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಭೆಯಲ್ಲಿ ಅಂಬಟ್ಟೆಮೂಲೆ ತರವಾಡು ಕಾರ್ನವರ್ ಕುಂಞÂ ಕಲೈಪಾಡಿ, ದೆಯ್ಯು ನೆಲಮರ್ವ, ಕರಿಯ ಬಯಲು ಪಾಂಡಿ, ಶ್ರೀಕೃಷ್ಣ ಅಂಬಟ್ಟೆಮೂಲೆ, ಬಾಬು ಕಲ್ಲುಗುಂಡಿ, ಮಣಿಕಂಠ ಬಯಲುಪಾಂಡಿ, ಯಶೋಧರ ಬಯಲುಪಾಂಡಿ, ಮಾಧವ ಜೋಡುಪಾಲ ಇವರನ್ನು ಗೌರವಿಸಲಾಯಿತು.
ಭಾಸ್ಕರ ಅಂಬಟ್ಟೆಮೂಲೆ ಸ್ವಾಗತಿಸಿ, ವಂದಿಸಿದರು. ವಿಜಯ ಬಯಲುಪಾಂಡಿ ವಂದಿಸಿದರು.
ಬೆಳಿಗ್ಗೆ ನಡೆದ ತರವಾಡು ಸಮಿತಿಯ ಮಹಾಸಭೆಯಲ್ಲಿ ಕುಂಞÂ ಕಲೈಪಾಡಿ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿ ಅಂಗೀಕಾರ ಪಡೆಯಲಾಯಿತು. ಜೊತೆಗೆ ಉಪಸಮಿತಿಗಳಾದ ಕಾರ್ಯಕ್ರಮ ಸಮಿತಿ, ಮಹಿಳಾ ಸಮಿತಿ, ಭಜನಾ ಸಮಿತಿ, ಸ್ವಸಹಾಯ ಸಂಘ ಹಾಗೂ ತರವಾಡು ನಿರ್ಮಾಣ ಸಮಿತಿಗಳ ವರದಿ ಲೆಕ್ಕಪತ್ರಗಳ ಮಂಡನೆ ನಡೆಯಿತು. ನಿಯಮಾವಳಿಯ ತಿದ್ದುಪಡಿ, ಸದಸ್ಯತನ ನವೀಕರಣ ವಿಷಯಗಳನ್ನು ಚರ್ಚಿಸಿ ಅಗತ್ಯದ ತೀರ್ಮಾನ ಕೈಗೊಳ್ಳಲಾಯಿತು. ಉಪಾಧ್ಯಕ್ಷ ಮಾಧವ ಜೋಡುಪಾಲ ವಂದಿಸಿದರು.


