ನಾಳೆ ಚಿತ್ರರಚನೆ ಸ್ಪರ್ಧೆ
0
ಡಿಸೆಂಬರ್ 21, 2018
ಕಾಸರಗೋಡು: ಕೈಮಗ್ಗ ಉತ್ಪನ್ನಗಳ ಬಗ್ಗೆ ಶಾಲಾ ವಿದ್ಯಾರ್ಥಿಗಳ ಚಿತ್ರರಚನೆ ಸ್ಪರ್ಧೆ ನಾಳೆ(ಡಿ.22ರಂದು) ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಕೇರಳದ ಕೈಮಗ್ಗ ಉತ್ಪನ್ನಗಳ ಬಗ್ಗೆ ಹೊಸತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಕೈಮಗ್ಗ ವಸ್ತ್ರ ನಿರ್ದೇಶನಾಲಯ ಮತ್ತು ಜಿಲ್ಲಾ ಉದ್ದಿಮೆ ಕೇಂದ್ರ ಜಂಟಿ ವತಿಯಿಂದ ಜಿಲ್ಲೆಯ ಕಿರಿಯ-ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮಕ್ಕಳಿಗಾಗಿ ಚಿತ್ರರಚನೆ ಸ್ಪರ್ಧೆ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಪರ್ಧೆ ಉದ್ಘಾಟಿಸುವರು. ಕಾಲೇಜು ಪ್ರಾಂಶುಪಾಲ ಡಾ.ಅರವಿಂದ್ ಕೃಷ್ಣನ್ ಕೆ.ಅಧ್ಯಕ್ಷತೆ ವಹಿಸುವರು. ಈಗಾಗಲೇ ಈ ಸಂಬಂಧ ಅರ್ಜಿ ಸಲ್ಲಿಸಿದ ಮತ್ತು ಹೊಸತಾಗಿ ಸಲ್ಲಿಸಲು ಆಸಕ್ತ ವಿದ್ಯಾರ್ಥಿಗಳು ಶಾಲಾ ಮುಖ್ಯಶಿಕ್ಷಕರ ದೃಢೀಕರಣ ಪತ್ರ ಸಹಿತ ಬೆಳಗ್ಗೆ 9 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಹಾಜರಾಗುವಂತೆ ತಿಳಿಸಲಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 9446426283, 7012282998 ಸಂಪರ್ಕಿಸಬಹುದಾಗಿದೆ.


