HEALTH TIPS

ಮಾನಿತಿ ಸಂಘಟನೆ ಸದಸ್ಯರ ಬೆನ್ನಲ್ಲೇ ಅಯ್ಯಪ್ಪ ದರ್ಶನಕ್ಕೆ ತೆರಳಿದ್ದ ಇಬ್ಬರು ಮಹಿಳೆಯರೂ ವಾಪಸ್

ಕೊಚ್ಚಿ: ಶಬರಿಮಲೆಯಲ್ಲಿ ಭಾನುವಾರ ನಡೆದ ಹೈಡ್ರಾಮಾ ಬಳಿಕ ಅದೇ ರೀತಿಯ ಮತ್ತೊಂದು ಘಟನೆ ಇಂದು(ಸೋಮವಾರ) ನಡೆದಿದ್ದು, ಅಯ್ಯಪ್ಪ ದರ್ಶನಕ್ಕೆ ತೆರಳಿದ್ದ ಇಬ್ಬರು ಮಹಿಳೆಯರೂ ಕೂಡ ಭಕ್ತರ ಪ್ರತಿಭಟನೆಗೆ ಹೆದರಿ ವಾಪಸ್ ಆಗಿದ್ದಾರೆ. ದೇಗುಲ ಪ್ರವೇಶ ಮಾಡಲು ಮುಂದಾಗಿದ್ದ ಮಹಿಳೆಯರಿಗೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು. ಆದರೆ, ಅಪಾರ ಸಂಖ್ಯೆಯಲ್ಲಿರುವ ಅಯ್ಯಪ್ಪನ ಭಕ್ತರ ಪ್ರತಿಭಟನೆ ನಡೆಸಿದ್ದು, ಮಹಿಳೆಯರನ್ನು ನಡಪಂದಲ್ ಬಳಿ ತಡೆದರು. ಸತತ 4 ಗಂಟೆಯಾದರೂ ಪ್ರತಿಭಟನಾಕಾರರ ಆಕ್ರೋಶ ತಣ್ಣಾಗಗದ ಹಿನ್ನಲೆಯಲ್ಲಿ ಮಹಿಳೆಯರು ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ದರ್ಶನಕ್ಕೆ ಮುಂದಾಗಿದ್ದ ಮಹಿಳೆಯರನ್ನು ಕೋಯಿಕೋಡ್‍ನ ದುರ್ಗಾ ಹಾಗೂ ಮಲಪ್ಪುರಂ ಮೂಲದ ಬಿಂದು ಎಂದು ಗುರುತಿಸಲಾಗಿದೆ. ಇಬ್ಬರೂ 45 ವರ್ಷದ ಆಸುಪಾಸಿನವರಾಗಿದ್ದಾರೆ. ನಿನ್ನೆಯಷ್ಟೇ ತಮಿಳುನಾಡಿನ 11 ಮಹಿಳೆಯರು ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ, ಭಕ್ತರ ತೀವ್ರ ಪ್ರತಿಭಟನೆಗೆ ಬೆದರಿ ದೇವರ ದರ್ಶನ ಪಡೆಯದೆ ವಾಪಸ್ಸಾಗಿದ್ದರು. ಇದಕ್ಕೂ ಮೊದಲು, ಅಪ್ಪಾಚಿಮೇಡು ಹಾಗೂ ಮರಕೂಟ್ಟಂ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಭಕ್ತರನ್ನು ಪೊಲೀಸರು ತೆರವುಗೊಳಿಸಿದ್ದರು. ಆದರೆ, ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡ ಬಳಿಕ ಅವರನ್ನು ನಿಯಂತ್ರಿಸಲು ಪೊಲೀಸರಿಂದಲೂ ಸಾಧ್ಯವಾಗುತ್ತಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries