ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ
0
ಡಿಸೆಂಬರ್ 25, 2018
ಉಪ್ಪಳ: ಯೇಸು ಕ್ರಿಸ್ತರ ಜನ್ಮ ದಿನಾಚರಣೆಯ ಹಬ್ಬವಾದ ಕ್ರಿಸ್ಮಸ್‍ನ್ನು ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಸೋಮವಾರ ರಾತ್ರಿ ಕ್ರೈಸ್ತರು ಜಾಗರಣೆಯ ರಾತ್ರಿಯನ್ನು ಆಚರಿಸಿದರು. ಬಲಿಪೂಜೆಯನ್ನು ರಾಂಚಿ ಅಲ್ಬಟ್ರ್ಸ್ ಕಾಲೇಜಿನ ಅಧ್ಯಕ್ಷ ಫಾದರ್ ಜೋನ್ ಕ್ರಾಸ್ತ ನೆರವೇರಿಸಿದರು.
ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಧರ್ಮಗುರು ಫಾದರ್ ವಿಕ್ಟರ್ ಡಿ ಸೋಜ ಸಂದೇಶ ನೀಡಿದರು. ಕ್ರಿಸ್ಮಸ್ ಹಬ್ಬದ ಅಂಗವಾಗಿ ಆಕರ್ಷಕ ಗೋದಲಿ , ನಕ್ಷತ್ರ ಹಾಗೂ ದೀಪಾಲಂಕಾರ ಮನಸೆಳೆಯುತ್ತಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಲಿಪೂಜೆ ಬಳಿಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕ್ರಿಸ್ಮಸ್ ಗೀತೆ ( ಕ್ಯಾರೋಲ್ ) ಗಳನ್ನು ಹಾಡುವ ಮೂಲಕ ಯೇಸು ಕ್ರಿಸ್ತರ ಜನನ ದಿನವನ್ನು ಸ್ಮರಿಸಿದರು. ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಯಲ್ಲಿ ಅಪಾರ ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.

