ಕುಕ್ಕಂಗೋಡ್ಲುನಲ್ಲಿ ಶುಕ್ರವಾರ ವಿವಿಧ ವೈಧಿಕ ಕಾರ್ಯಕ್ರಮ
0
ಡಿಸೆಂಬರ್ 25, 2018
ಬದಿಯಡ್ಕ: ಜೀರ್ಣೋದ್ದಾರಗೊಳ್ಳುತಿರುವ ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಗಣಪತಿ ಗುಡಿಯ ಕೆಲಸವು ಪೂರ್ತಿಗೊಂಡು ಸುತ್ತು ಗೋಪುರದ ಕೆಲಸವು ಅಂತಿಮ ಹಂತದಲ್ಲಿದ್ದು ಎಲ್ಲಾ ಕೆಲಸಗಳು ಅತೀ ಶೀಘ್ರ ನಡೆಯಲು ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಡಿ. 28 ರಂದು ಶುಕ್ರವಾರ ಬೆಳಿಗ್ಗೆ 8 ಕ್ಕೆ ಗಣಪತಿ ಹವನ, ರಾತ್ರಿ 8 ಕ್ಕೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ದುರ್ಗಾಪೂಜೆ ನಡೆಯಲಿದೆ. ಬಳಿಕ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಕಾರ್ತಿಕಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜೀರ್ಣೋದ್ದಾರ ಕಾರ್ಯದಲ್ಲಿ ಸಂಪೂರ್ಣ ಸಹಕರಿಸಬೇಕಾಗಿ ವಿನಂತಿಸಲಾಗಿದೆ.


