ಮಾಹಿತಿ ತಂತ್ರಜ್ಞಾನದೊಂದಿಗೆ ನೂತನ ಆವಿಷ್ಕಾರಗಳು ಮಾನವ ಜೀವನದಲ್ಲಿ ಬದಲಾವಣೆಗಳನ್ನು ತರುತ್ತಿವೆ- ವಿಷ್ಣುಪ್ರಕಾಶ್ ಮುಳ್ಳೇರಿಯ
0
ಡಿಸೆಂಬರ್ 25, 2018
ಮುಳ್ಳೇರಿಯ: ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬಿಎಆರ್‍ಎಚ್‍ಎಸ್‍ಎಸ್ ಬೋವಿಕ್ಕಾನ ಶಾಲಾ ಸಪ್ತದಿನದ ಎನ್.ಎಸ್.ಎಸ್ ಶಿಬಿರದ ಅಂಗವಾಗಿ "ಡಿಜಿಟಲೈಸೇಶನ್" ಎಂಬ ವಿಚಾರ ಸಂಕಿರಣವನ್ನು ವಿಷ್ಣುಪ್ರಕಾಶ್ ಮುಳ್ಳೇರಿಯ ಸಂಪನ್ಮೂಲ ವ್ಯಕ್ತಿಯಾಗಿ ನಡೆಸಿಕೊಟ್ಟರು.
ಮಾಹಿತಿ ತಂತ್ರಜ್ಞಾನದೊಂದಿಗೆ ನೂತನ ಆವಿಷ್ಕಾರಗಳು ಮಾನವ ಜೀವನದಲ್ಲಿ ಬದಲಾವಣೆಗಳನ್ನು ತರುತ್ತಿವೆ. ಸಮೂಹ ಮಾಧ್ಯಮಗಳು, ವಿಜ್ಞಾನ-ತಂತ್ರಜ್ಞಾನ, ಆರೋಗ್ಯ ಮತ್ತು ವೈದ್ಯಕೀಯ,ರಕ್ಷಣಾ ವ್ಯವಸ್ಥೆ, ಆನ್‍ಲೈನ್ ಸಾರಿಗೆ, ಆನ್‍ಲೈನ್ ವ್ಯಾಪಾರ, ಆನ್‍ಲೈನ್ ಬ್ಯಾಂಕ್, ವಿವಿಧ ತರದ ಎಪ್ಲಿಕೇಷನ್‍ಗಳು ಮತ್ತು ಕೃಷಿರಂಗ ಮುಂತಾದ ವಿಷಯಗಳಲ್ಲಿ ಆದ ಬದಲಾವಣೆಯು ಹೊಸ ಕ್ರಾಂತಿಯನ್ನು ಮಾಡಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನದ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳು ಮತ್ತು ಪ್ರಯೋಜನಗಳನ್ನು ಚರ್ಚೆಯ ಮೂಲಕ ವ್ಯಕ್ತಪಡಿಸಿದರು.
ಬಿಎಆರ್‍ಎಚ್‍ಎಸ್‍ಎಸ್ ಬೋವಿಕ್ಕಾನ ಶಾಲಾ ಅಧ್ಯಾಪಕ ರತ್ನಾಕರ ಅವರು ವಿಷ್ಣುಪ್ರಕಾಶ್ ಮುಳ್ಳೇರಿಯ ಅವರಿಗೆ ಸ್ಮರಣಿಕೆಯನ್ನು ಕೊಟ್ಟು ಗೌರವಿಸಿದರು. ಯೋಜನಾಧಿಕಾರಿ ಪ್ರೀಂತಂ.ಎ.ಕೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಶಿಧರನ್ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕಿರ್ತನಾನಾಥ್ ಸ್ವಾಗತಿಸಿ, ಯದುಕೃಷ್ಣ ವಂದಿಸಿದರು.


