ಮಧೂರು ಬ್ಯಾಂಕ್‍ನ ನೂತನ ಆಡಳಿತ ಮಂಡಳಿಯ ಪದಗ್ರಹಣ
0
ಡಿಸೆಂಬರ್ 17, 2018
ಮಧೂರು: ಮಧೂರು ಸೇವಾ ಸಹಕಾರಿ ಬ್ಯಾಂಕ್‍ನ 2018-2023ರ ಕಾಲಾವಧಿಗೆ ಆಯ್ಕೆಯಾದ ಆಡಳಿತ ಮಂಡಳಿಯ ನಿರ್ದೇಶಕರ ಪದಗ್ರಹಣ ಕಾರ್ಯಕ್ರಮವು ಬ್ಯಾಂಕ್‍ನಲ್ಲಿ ಇತ್ತೀಚೆಗೆ ಜರಗಿತು.
ಚುನಾವಣಾಧಿಕಾರಿ, ಇಲಾಖಾ ಘಟಕದ ಇನ್ಸ್‍ಪೆಕ್ಟರ್ ಬೈಜುರಾಜ್ ಅವರು ನಾರಾಯಣಯ್ಯ ಕೆ. ಅಧ್ಯಕ್ಷರಾಗಿ ಹಾಗೂ ಉಮೇಶ್ ಯು. ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು.
ಆ ಬಳಿಕ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಪುನರಾಯ್ಕೆಯಾದ ನಾರಾಯಣಯ್ಯ ಅವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಆತಿಥಿಗಳಾಗಿ ಬಿಜೆಪಿ ನೇತಾರರಾದ ರಾಧಾಕೃಷ್ಣ ಸೂರ್ಲು, ಸುಕುಮಾರ ಕುದ್ರೆಪ್ಪಾಡಿ, ಸುಜ್ಞಾನಿ ಶಾನ್‍ಭೋಗ್ ಅವರು ನಿರ್ದೇಶಕರಿಗೆ ಶಾಲು ಹೊದಿಸಿ ಅಭಿನಂದಿಸಿದರು. ಸಹಕಾರ ಭಾರತಿಯ ಮುಖಂಡರಾದ ಗಣಪತಿ ಕೋಟೆಕಣಿ, ಗಣೇಶ್ ಪಾರೆಕಟ್ಟ ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಶುಭ ಹಾರೈಸಿದರು.
ನೂತನ ನಿರ್ದೇಶಕರಾದ ರಾಮ ಎ, ಸಂತೋಷ್‍ಕುಮಾರ್ ನಾೈಕ್, ಅನುಪಮಾ, ಸುಬ್ಬಣ್ಣ ನಾೈಕ್, ಶಾರದಾ ಎಸ್.ಎನ್.ಭಟ್, ಸರ್ವೇಶ್ವರ ಕುಮಾರ್ ಭಟ್ ಡಿ, ಪುಷ್ಪಲತಾ ಎಲ್, ಮಾಜಿ ನಿರ್ದೇಶಕರಾದ ಸಂಜೀವ ಸುವರ್ಣ, ರವಿಶಂಕರ, ದುರ್ಗಾಪರಮೇಶ್ವರಿ, ಮಾಲಿಂಗ ನಾೈಕ್, ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಧ್ಯಕ್ಷರು ಮಾತನಾಡಿ ಆಡಳಿತ ಮಂಡಳಿಯ ಆಯ್ಕೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿ ಬ್ಯಾಂಕ್‍ನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಎಲ್ಲರ ಸಹಕಾರವನ್ನು ಅಪೇಕ್ಷಿಸಿದರು. ಕಾರ್ಯದರ್ಶಿ ಎ.ಎನ್.ಮಲ್ಯ ಸ್ವಾಗತಿಸಿ, ಉಪಾಧ್ಯಕ್ಷ ಉಮೇಶ್ ಯು. ವಂದಿಸಿದರು.


