ಪ್ರಕೃತಿಯ ಹಿತವೇ ನನ್ನ ಹಿತ : ಪುರುಷೋತ್ತಮ ಪ್ರತಾಪನಗರ
0
ಡಿಸೆಂಬರ್ 17, 2018
ಉಪ್ಪಳ: ಪ್ರಕೃತಿಯ ಹಿತವನ್ನು ಕಾಪಾಡಿಕೊಂಡು ಪ್ರಕೃತಿಯ ಹಿತವೇ ನನ್ನ ಹಿತವೆಂದು ಜೀವನ ಮಾಡುವುದೇ ಹಿಂದು ಜೀವನ ಪದ್ಧತಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾಲೇಜು ವಿದ್ಯಾರ್ಥಿ ಪ್ರಮುಖ್ ಪುರುಷೋತ್ತಮ ಪ್ರತಾಪನಗರ ತಿಳಿಸಿದರು.
ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ಮಂಡಲಕಾಲದ 52 ದಿನಗಳ ಕಾಲ ನಡೆಯುತ್ತಿರುವ ಅನ್ನದಾನದ ಸಂದರ್ಭದಲ್ಲಿ ಉಪ್ಪಳದ ಸಾಮಾಜಿಕ ಸಂಘಟನೆ ಯುವಭಾರತಿ ವತಿಯಿಂದ ನಡೆದ ಧಾರ್ಮಿಕ ಸತ್ಸಂಗದ 4 ನೇ ವಾರದ ಕಾರ್ಯಕ್ರಮದಲ್ಲಿ ಹಿಂದು ಜೀವನ ಪದ್ಧ್ದತಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಹಿಂದು ಜೀವನ ಪದ್ಧತಿ ಶ್ರೇಷ್ಠವಾದ ಜೀವನ ವಿಧಾನ. ಧರ್ಮ, ಅರ್ಥ, ಕಾಮ, ಮೋಕ್ಷ ಇದರಂತೆ ಜೀವನ ಮಾಡುವುದೇ ಆದರ್ಶ ಜೀವನ ಪದ್ಧತಿ. ಸಕಲ ಚರಾಚರಗಳಲ್ಲೂ ಭಗವಂತನನ್ನು ಕಾಣುವುದರ ಮೂಲಕ ಜೀವನ ಮಾಡುವುದಾಗಿದೆ ಎಂದರು.
ಸತ್ಸಂಗ ಕಾರ್ಯಕ್ರಮದಲ್ಲಿ ಉಪ್ಪಳ ಅಯ್ಯಪ್ಪ ಮಂದಿರದ ಗುರುಸ್ವಾಮಿಗಳಾದ ಕುಟ್ಟಿ ಕೃಷ್ಣನ್ ಮತ್ತು ಉಪ್ಪಳ ಅಯ್ಯಪ್ಪ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಐಲ ಉಪಸ್ಥಿತರಿದ್ದರು. ಶ್ರೀಧರ್ಮ ಶಾಸ್ತಾ ಬಾಲಗೋಕುಲದ ಪುಟಾಣಿಗಳು ಪ್ರಾರ್ಥನೆ ಹಾಡಿದರು. ಯುವ ಭಾರತಿ ಪ್ರಧಾನ ಕಾರ್ಯದರ್ಶಿ ಅಶೋಕ ಬಂದ್ಯೋಡು ಸ್ವಾಗತಿಸಿ, ಸದಸ್ಯ ಶಿವಾನಂದ ಐಲ ವಂದಿಸಿದರು. ಯುವ ಭಾರತಿ ಅಧ್ಯಕ್ಷ ರತೀಶ ಐಲ ಕಾರ್ಯಕ್ರಮ ನಿರೂಪಿಸಿದರು. ಸತ್ಸಂಗ ಕಾರ್ಯಕ್ರಮದಲ್ಲಿ ಮಾತೆಯರು, ಮಹನೀಯರು, ಅಯ್ಯಪ್ಪ ವ್ರತಾಧಾರಿಗಳು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.


