ಇಂದು ಕುರುಡಪದವು ಗುರುಸಂಗಮ ಉದ್ಘಾಟನೆ
0
ಡಿಸೆಂಬರ್ 25, 2018
ಉಪ್ಪಳ: ಕುರುಡಪದವು ಗೆಳೆಯರ ಬಳಗ ಗ್ರಂಥಾಲಯದ ಗುರುಸಂಗಮ ಕಾರ್ಯಕ್ರಮದ ಉದ್ಘಾಟನೆ ಮತ್ತು ನಿವೃತ್ತ ಅಂಚೆ ನೌಕರ ತ್ಯಾಂಪಣ್ಣ ಚಿಪ್ಪಾರು ಅವರಿಗೆ ಗೌರವಾರ್ಪಣೆ ಡಿ.26ರಂದು ಅಪರಾಹ್ನ 2.30ಕ್ಕೆ ಗ್ರಂಥಾಲಯದ ಪರಿಸರದಲ್ಲಿ ಜರಗಲಿದೆ.
ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್‍ನ ಅಧ್ಯಕ್ಷ ಎಸ್.ನಾರಾಯಣ ಭಟ್ ಉದ್ಘಾಟಿಸುವರು. ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿವಿಧ ವಲಯಗಳ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿರುವರು.

