ಪೆರ್ಮುದೆಯಲ್ಲಿ ಕ್ರಿಸ್ಮಸ್ ಆಚರಣೆ
0
ಡಿಸೆಂಬರ್ 25, 2018
ಕುಂಬಳೆ: ಪ್ರೀತಿ, ತ್ಯಾಗ, ಸೇವೆಯ ಸಂದೇಶವನ್ನು ಭೂಲೋಕದಲ್ಲಿ ಸಾರಿದ ದೇವಪುತ್ರ ಯೇಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಪೆರ್ಮುದೆ ಸೈಂಟ್ ಲಾರೆನ್ಸ್ ಇಗರ್ಜಿಯಲ್ಲಿ ಸಡಗರದೊಂದಿಗೆ ಆಚರಿಸಲಾಯಿತು.
ಸೋಮವಾರ ರಾತ್ರಿ ಇಗರ್ಜಿಯ ಅಂಗಣದ ತೆರೆದ ವೇದಿಕೆಯಲ್ಲಿ ನಡೆದ ಸಂಭ್ರಮದ ದಿವ್ಯಬಲಿಪೂಜೆಯಲ್ಲಿ ಫಾ. ಪ್ರತೀಕ್ ಪಿರೇರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ಯಾರೋಲ್ಸ್ ಗಾಯನ ನಡೆಯಿತು. ದಿವ್ಯಬಲಿಪೂಜೆ ಸಂದರ್ಭ ಬಾಲಯೇಸುವನ್ನು ನಮಿಸಿ ಭಕ್ತರು ಕಾಣಿಕೆಗಳನ್ನು ಅರ್ಪಿಸಿದರು. ಐಸಿವೈಎಂ ನೇತೃತ್ವದಲ್ಲಿ ಇಗರ್ಜಿ ಸಮೀಪ ಗೋದಲಿ ನಿರ್ಮಿಸಲಾಗಿದ್ದು, ಕ್ರೈಸ್ತರ ಸಹಿತ ಅಕ್ರೈಸ್ತ ಬಾಂಧವರು ಗೋದಲಿಯನ್ನು ವೀಕ್ಷಿಸಿದರು. ಪೆರ್ಮುದೆ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯ ನೂತನ ಕಟ್ಟಡದ ನಿರ್ಮಾಣದ ಹಿನ್ನಲೆಯಲ್ಲಿ ತಯಾರಿಸಲಾದ ಲಕ್ಕಿಡಿಪ್ ಕೂಪನ್‍ನ್ನು ಇಗರ್ಜಿಯ ಪಾಲನ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡಿಸೋಜ ಪುರುಷಮಜಲು ಅವರಿಗೆ ನೀಡುವುದರ ಮೂಲಕ ವಂದನೀಯ ಫಾ. ಪ್ರತೀಕ್ ಪಿರೇರಾ ಬಿಡುಗಡೆಗೊಳಿಸಿದರು. ಪಾಲನ ಸಮಿತಿ ಕಾರ್ಯದರ್ಶಿ ಜೋನ್ ಡಿಸೋಜ ಚನ್ನಿಕೋಡಿ, ಗುರಿಕ್ಕಾರ ವಿನ್ಸೆಂಟ್ ಮೊಂತೆರೋ ಪೆರಿಯಡ್ಕ, ಸಂತೋಷ್ ಮೊಂತೆರೊ ಪೆರಿಯಡ್ಕ ಉಪಸ್ಥಿತರಿದ್ದರು. ಮಂಗಳವಾರ ಬೆಳಿಗ್ಗೆ ಕ್ರಿಸ್ಮಸ್ ಸಂಭ್ರಮಾರ್ಥ ದಿವ್ಯಬಲಿಪೂಜೆ ನಡೆಯಿತು.



