ಶಬರಿಮಲೆ ಘಟನೆ ಇನ್ನಷ್ಟು ಬಿಗಡಾಯಿಸುವ ಸೂಚನೆ-ಮನಿದಿ ನೆರಳಲ್ಲಿ ಏನಿದಿಯೋ!
0
ಡಿಸೆಂಬರ್ 25, 2018
ಕಾಸರಗೋಡು: ಡಿ.27ರ ಮೊದಲು ಶಬರಿಮಲೆ ದರ್ಶನ ನಡೆಸಿಯೇ ಸಿದ್ದ ಎಂಬ ನಿಲುವಿನೊಂದಿಗೆ ಮುನ್ನೂರರಷ್ಟು ಯುವತಿಯರು ಸಿದ್ದರಾಗಿ ನಿಂತಿರುವುದಾಗಿ ಕೇಂದ್ರ ಗುಪ್ತಚರ ವಿಭಾಗ ಸರಕಾರಕ್ಕೆ ವರದಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಈಗಾಗಲೇ ಶಬರಿಮಲೆಗೆ ಭಾನುವಾರ, ಸೋಮವಾರಗಳಂದು ಯುವತಿಯರು ನುಗ್ಗಲು ಯತ್ನಿಸಿರುವುದು ಈ ಯೋಜನೆಯ ಪರೀಕ್ಷಾರ್ಥ ಪ್ರಯತ್ನವೆಂದು ಸರಕಾರಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಮಿಳುನಾಡಿನ ಮನಿದಿ ಸಂಘಟನೆಯ ಸದಸ್ಯೆಯರು ಹಾಗೂ ಕಲ್ಲಿಕೋಟೆ ಮತ್ತು ಮಲಪ್ಪುರಂ ನ ಇಬ್ಬರು ಯುವತಿಯರು ಶಬರಿಮಲೆ ಪ್ರವೇಶ ನಡೆಸಲು ಯತ್ನಿಸಿದ್ದರೂ ತೀವ್ರಗೊಂಡ ಭಕ್ತರ ಪ್ರತಿಭಟನೆಯ ಕಾರಣ ಯುವತಿಯರು ದೇವಾಲಯ ಪ್ರವೇಶಿಸದೆ ಹಿಂತಿರುಗಬೇಕಾಯಿತು. ಈ ಮಧ್ಯೆ ಮಂಡಲ ಪೂಜಾ ದಿನದ ಮೊದಲೇ ಶಬರಿಮಲೆ ಪ್ರವೇಶಿಸಿಯೇ ಸಿದ್ದ ಎಂಬ ಹಠದೊಂದಿಗೆ ಪುರುಷರ ಬೆಂಗಾವಲಿನೊಂದಿಗೆ 300 ರಷ್ಟು ಯುವತಿಯರ ತಂಡ ಆಗಮಿಸುವ ಸಿದ್ದತೆಯಲ್ಲಿದೆ ಎಂದು ಅಂದಾಜಿಸಲಾಗಿದೆ. ತಲಶ್ಚೇರಿ, ವಡಗರ ಮತ್ತು ಕೊೈಲಾಂಡಿ ವಲಯಗಳ ಕೆಲವು ಸಿಪಿಐಎಂಎಲ್ ಕಟ್ಟಾ ವಾಮವಾದಿ ಪಕ್ಷಗಳ ಕಾರ್ಯಕರ್ತರು ನೇತೃತ್ವ ವಹಿಸುತ್ತಿದ್ದಾರೆ ಗುಪ್ತಚರ ವರದಿಯಲ್ಲಿ ತಿಳಿಸಲಾಗಿದೆ.
ನವೋತ್ಥಾನ ಕೇರಳ ಶಬರಿಮಲೆಗೆ ಎಂಬ ಫೇಸ್‍ಬುಕ್ ಪುಟ ಹಾಗೂ ಇತರ ಗುಪ್ತ ವಾಟ್ಸ್‍ಫ್ ಗುಂಪುಗಳ ಮೂಲಕ ಈ ಬಗ್ಗೆ ಪ್ರಚಾರ ನಡೆಸಲಾಗುತ್ತಿದೆ. ಈ ರೀತಿಯಲ್ಲಿ ಶಬರಿಮಲೆ ಪ್ರವೇಶಿಸಲು ಪಣತೊಟ್ಟಿರುವ ಮಹಿಳೆಯರಲ್ಲಿ ಕೇರಳದವರು ಮಾತ್ರವಲ್ಲದೆ ದೇಶದ ಇತರ ರಾಜ್ಯಗಳ ಪ್ರಗತಿಪರ ಚಿಂತನೆಗಳ ಹಣೆಪಟ್ಟಿ ಕಟ್ಟಿದವರೂ ಒಳಗೊಂಡಿದ್ದಾರೆ. ತಮಿಳುನಾಡು ಮೂಲದ ಮನಿದಿ ಎಂಬ ಕಟ್ಟಾ ವಾಮವಾದಿ ಸಂಘಟನೆ ಇದರ ಬೆನ್ನಿಗಿದೆ ಎಂದು ಗುಪ್ತಚರ ವರದಿ ತಿಳಿಸಿದೆ. ಈ ವರದಿಯ ಆಧಾರದ ಹಿನ್ನೆಲೆಯಲ್ಲಿ ಶಬರಿಮಲೆಗೆ ಇನ್ನಷ್ಟು ಪೋಲೀಸರನ್ನು ನೇಮಿಸಲು ಸರಕಾರ ಚಿಂತನೆ ನಡೆಸಿದೆ.
ಮನಿದಿಯ ಲೀಡರ್ ಹೇಳಿಕೆ=ಮುಖ್ಯಮಥ್ರಿಯೊಮದಿಗೆ ಭೇಟಿ ಆಗ್ರಹ::!
ಈ ಮಧ್ಯೆ ತಮಿಳುನಾಡು ಮೂಲದ ಪ್ರಗತಿಪರ ಮಹಿಳಾ ಒಕ್ಕೂಟವಾದ ಮನಿದಿಯ ಸಂಯೋಜಕಿ ಸೆಲ್ವಿ ಎಂಬವರು ಮಂಗಳವಾರ ಅಪರಾಹ್ನ ಮಾಧ್ಯಮದವರೊಂದಿಗೆ ಮಾತನಾಡಿ ತನಗೆ ಕೇರಳದ ಮುಖ್ಯಮಂತ್ರಿಗಳೊಂದಿಗೆ ಕೆಲವು ವಿಚಾರಗಳ ಬಗ್ಗೆ ಮಾತನಾಡಬೇಕಿದೆ ಎಂದು ತಿಳಿಸಿರುವರು.
ಭಾನುವಾರ ಶಬರಿಮಲೆ ಸನ್ನಿಧಿಗೆ ತೆರಳಲು ಯತ್ನಿಸಿದ ಮಹಿಳೆಯರ ತಂಡದಲ್ಲಿ ದೈವ ವಿಶ್ವಾಸಿಗಳು ಇರಲಿಲ್ಲ ಎಂಬ ವಾದ ನಿಜ. ಆದರೆ ಮದಿನಿ ಸಂಘಟನೆಯ ಮೂಲಕ ನಮ್ಮಲ್ಲಿ ಕೇಳಿಕೊಂಡ ನಾಲ್ವರು ಮಹಿಳಾ ಭಕ್ತೆಯರ ಬೇಡಿಕೆಯನ್ನು ಪೂರೈಸಲು ಅವರಿಗೆ ಬೆಂಗಾವಲಾಗಿ ಮಹಿಳಾ ಸದಸ್ಯರ ತಂಡ ಬಂದಿತ್ತೆಂದು ಅವರು ತಿಳಿಸಿರುವರು.
ಮದಿನಿ ಸಂಘಟನೆಯ ಬಗ್ಗೆ ಕೇರಳದಲ್ಲಿ ತಪ್ಪು ಕಲ್ಪನೆಗಳಿವೆ. ಶಬರಿಮಲೆ ಘಟನೆಗೆ ಸಂಬಂಧಿಸಿ ಮದಿನಿ ಸಂಘಟನೆಯನ್ನು ನಕ್ಸಲ್&ಮಾವೋಯಿಸ್ಟ್ ಗಳೊಂದಿಗೆ ತಳುಕು ಹಾಕಲೆತ್ನಿಸಲಾಗಿದೆ. ಆದರೆ ನಾವು ಮಾವೋಯಿಸ್ಟ್ ಗಳಲ್ಲ ಎಂದು ಸೆಲ್ವಿ ತಿಳಿಸಿದ್ದು, ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿ ಅನುಮತಿ ನೀಡಬೇಕೆಂದು ತಿಳಿಸಿರುವರು. ತಮ್ಮ ಸಂಘಟನೆಯ ನೇತೃತ್ವದಲ್ಲೇ ಮಹಿಳೆಯರು ಶಬರಿಮಲೆ ದರ್ಶನ ನಡೆಸಬೇಕೆಂಬ ಇಚ್ಚೆ ಸಂಘಟನೆಗಿಒಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನು ಜಾರಿಗೊಳಿಸಲೇ ಬೇಕು. ಅದಕ್ಕಾಗಿರುವ ಅಡ್ಡಿಯನ್ನು ನಿವಾರಿಸುವ ವರೆಗೆ ಸಂಘಟನೆ ಮಹಿಳೆಯರೊಂದಿಗೆ ಇರಲಿದೆ ಎಂದು ಅವರು ತಿಳಿಸಿರುವರು.
ದೈವಸ್ವಂ ಬೋರ್ಡ್‍ನ ಹೊಸ ರಾಗ::
ಮಂಗಳವಾರ ಪತ್ತನಂತಿಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಿದ ದೈವಸ್ವಂ ಬೋರ್ಡ್ ಅಧ್ಯಕ್ಷ ಪದ್ಮಕುಮಾರ್ ಅವರು ಹೊಸ ಬೇಡಿಕೆಯ ಮೂಲಕ ಮತ್ತೊಮ್ಮೆ ಚಕಿತಗೊಳಿಸಿದ್ದಾರೆ. ಮಂಡಲ&ಮಕರ ಬೆಳಕು ಕಾಲಾವಧಿಯಲ್ಲಿ ಮಹಿಳೆಯರು ದಯವಿಟ್ಟು ಶಬರಿಮಲೆಗೆ ಆಗಮಿಸಬೇಡಿ ಎಂದು ಅವರು ಹೇಳಿಕೆ ನೀಡಿದ್ದಾರೆ.
ಮಕರ ಬೆಳಕು ಸಂದರ್ಭ ದೇಶದ ಉದ್ದಗಲದ ಅಯ್ಯಪ್ಪ ಭಕ್ತರಿಂದ ಶಬರಿಮಲೆ ಜನಜಂಗುಳಿಯಿಂದ ಕೂಡಿರುತ್ತದೆ. ಈ ವೇಳೆ ಪುಟ್ಟ ಸಂಘರ್ಷವಾದರೂ ಅದು ಲಕ್ಷಾಂತರ ಭಕ್ತರನ್ನು ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತದೆ. ಆದುದರಿಂದ ಮಹಿಳೆಯರು ಅದೊಂದು ತಿಂಗಳು ಶಬರಿಮಲೆ ದರ್ಶನಕ್ಕೆ ಆಗಮಿಸುವುದು ಹಿತವಲ್ಲ ಎಂದು ಅವರು ತಿಳಿಸಿದ್ದಾರೆ.
ಕೈಚೆಲ್ಲುವ ಸೂಚನೆ ನೀಡಿದ ಪೋಲೀಸರು::
ಶಬರಿಮಲೆಗೆ ಆಗಮಿಸುವ ಪ್ರಗತಿಪರರಿಗೆ(ಅಕ್ಟಿವಿಸ್ಟ್) ಪೋಲೀಸರಿಂದ ರಕ್ಷಣೆ ನೀಡಲು ಸಾಧ್ಯವಾಗದು ಎಂದು ಪೋಲೀಸ್ ಇಲಾಖೆ ಇಂಗಿತ ವ್ಯಕ್ತಪಡಿಸಿದೆ.
ಅಪರಾಧಿ ಹಿನ್ನೆಲೆಯ ಪ್ರಗತಿಪರ ಮಹಿಳೆಯರನ್ನು ಶಬರಿಮಲೆ ದರ್ಶನಕ್ಕೆ ರಕ್ಷಣೆ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲಲಿ ಶಬರಿಮಲೆ ಪ್ರವೇಶ ಹೋರಾಟ ಬಿಗುಗೊಳ್ಳುವ ಸಾಧ್ಯತೆಯಿದೆ. ಪ್ರಚಾರಗಳಿಸಲು ಆಗಮಿಸುವವರಿಗೆ ರಕ್ಷಣೆ ನೀಡಲಾಗದು ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಸೋಮವಾರ ಶಬರಿಮಲೆ ದರ್ಶನಕ್ಕೆ ಯತ್ನಿಸಿದ್ದ ಬಿಂದು ಎಂಬ ಮಹಿಳೆಯ ಹಿಂದೆ ಕರಾಳ ಅಪರಾಧಗಳ ನೆರಳಿದೆ. ಅಂತವರಿಗೆ ರಕ್ಷಣೆಯೊದಗಿಸಲು ಪೋಲೀಸರಿಂದ ಅಸಾಧ್ಯ. ಅದು ಪೋಲೀಸ್ ವ್ಯವಸ್ಥೆಗೆ ಎಸಗುವ ಅವಮಾನವೆಂದು ಮೂಲಗಳು ತಿಳಿಸಿವೆ.


