ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳು ಜಂಟಿಯಾಗಿ ಜಾರಿಗೊಳಿಸುವ ನೌಕರಿ ನಿಪುಣತೆ ತರಬೇತಿ ಯೋಜನೆ ಡಿ.ಡಿ.ಯು.ಜಿ.ಕೆ.ಯ ಅಂಗವಾಗಿ ನಡೆಸಲಾಗುವ ಕಂಪನಿ ಕಾರ್ಯಕಾರಿ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಜ.29ರಂದು ಕಾಸರಗೋಡು ಸಿ.ಪಿ.ಸಿ.ಆರ್.ಐ.ಯಲ್ಲಿ ನಡೆಯಲಿದೆ.
ಕುಟುಂಬಶ್ರೀ ಮೂಲಕ ರಾಜ್ಯದಲ್ಲಿ ಜಾರಿಗೊಳಿಸುವ ಉಚಿತ ನೌಕರಿ ನಿಪುಣತೆ ತರಬೇತಿ ಯೋಜನೆ ಡಿ.ಇ.ಡಿ.ಯು.ಜಿ.ಕೆ.ವೈ. ಯೋಜನೆ ಮೂಲಕ ಶಿಕ್ಷಣ ಪಡೆದ ಎಲ್ಲ ಉದ್ಯೋಗಾರ್ಥಿಗಳಿಗೆ ನೌಕರಿ ಒದಗಿಸುವುದು, ತರಬೇತಿ ನೀಡಲು ಆಸಕ್ತಿಯಿರುವ ನೂತನ ಏಜೆನ್ಸಿಗಳ ಆಯ್ಕೆ, ತರಬೇತಿ ಮೂಲಕ ನೌಕರಿ ಪಡೆದವರ ಅನುಭವ ವಿನಿಮಯ, ಈಗಿರುವ ನೌಕರಿ ಸಾಧ್ಯತೆ ಕುರಿತು ಸಂಸ್ಥೆಗಳ ಮಾಲೀಕರೊಂದಿಗೆ ಚರ್ಚಿಸಿ ಅದಕ್ಕೆ ಪೂರಕವಾದ ತರಬೇತಿ ನೀಡುವುದು ಇಲ್ಲಿನ ಪ್ರಧಾನ ಉದ್ದೇಶವಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಉದ್ಘಾಟಿಸುವರು. ಕುಟುಂಬಶ್ರೀ ಮಿಷನ್ ಡಿ.ಡಿ.ಯು.ಜಿ.ಕೆ.ವೈ. ಕಾರ್ಯಕ್ರಮಾಧಿಕಾರಿ ವಿಪಿನ್ ಜೋಸ್ ಯೋಜನೆ ಕುರಿತು ಮಾಹಿತಿ ನೀಡುವರು.

