HEALTH TIPS

ರೈಲು ಕಳ್ಳರೇ ಎಚ್ಚರಿಕೆ- ಪ್ರಯಾಣ ಮುಕ್ತಾಯಕ್ಕೆ 30 ನಿಮಿಷ ಮುಂಚೆ ಬ್ಲಾಂಕೆಟ್ ವಾಪಸ್ ಕೊಡಬೇಕು!

 
          ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಇರಿಸಲಾದ ವಸ್ತುಗಳು ಎಗ್ಗಿಲ್ಲದೇ ಕಳ್ಳತನವಾಗುತ್ತಿದ್ದು, ಸಾರ್ವಜನಿಕ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ.
    ಕಳೆದ ವರ್ಷ ಬಿಡುಗಡೆಯಾದ ಅಂಕಿ-ಅಂಶದ ಪ್ರಕಾರ 2017 ರಲ್ಲಿ ದೀರ್ಘಪ್ರಯಾಣದ ರೈಲುಗಳಲ್ಲಿ ಬರೊಬ್ಬರಿ 1.95 ಲಕ್ಷ ಟವಲ್ ಗಳು, 81,736 ಬೆಡ್ ಶೀಟ್ ಗಳು, 55,573 ಪಿಲ್ಲೋ ಕವರ್, 5,038 ಪಿಲ್ಲೋ, 7,043 ಬ್ಲಾಂಕೆಟ್ ಗಳು 200 ಟಾಯ್ಲೆಟ್ ಮಗ್, 1,000 ಟ್ಯಾಪ್ 300 ಫ್ಲಶ್ ಪೈಪ್ ಗಳು ಕಳ್ಳತನವಾಗಿದೆ.
    2018 ರಲ್ಲಿ 79,350 ಹ್ಯಾಂಡ್ ಟವಲ್ ಗಳು, 27,545 ಬೆಡ್ ಶೀಟ್ ಗಳು, 21,050 ಪಿಲ್ಲೋ ಕವರ್, 2,150 ಪಿಲ್ಲೋಗಳು 2,065 ಬ್ಲಾಂಕೆಟ್ ಗಳು ಕಳ್ಳತನವಾಗಿದ್ದು ಇವುಗಳ ಒಟ್ಟು ಮೊತ್ತ 62 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ರೈಲ್ವೆ ಇಲಾಖೆಯ ಬ್ಲಾಂಕೆಟ್ ಸೇರಿದಂತೆ ಇತರ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದ್ದು ಇನ್ನು ಮುಂದೆ 30 ನಿಮಿಷಗಳಷ್ಟು ಪ್ರಯಾಣ ಬಾಕಿ ಇರುವಾಗಲೇ ಬ್ಲಾಂಕೆಟ್ ನ್ನು ವಾಪಸ್ ಪಡೆಯುವ ಕ್ರಮ ಅಳವಡಿಸಿಕೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries