HEALTH TIPS

No title

   ವಿಶ್ವಾದ್ಯಂತ 77 ಕೋಟಿ ಇಮೇಲ್ ವಿಳಾಸ, 2.1 ಕೋಟಿ ಪಾಸ್?ವರ್ಡ್ ಲೀಕ್!
    ನವದೆಹಲಿ: ಇಂಟರ್ನೆಟ್ ಇತಿಹಾಸದಲ್ಲೇ ವಿಶ್ವದ ಅತೀ ದೊಡ್ಡ ಆನ್ ಲೈನ್ ಭದ್ರತಾ ಮಾಹಿತಿ ಸೋರಿಕೆಯಾಗಿದ್ದು, ವಿಶ್ವಾದ್ಯಂತ ಸುಮಾರು 77 ಕೋಟಿ ಇಮೇಲ್ ವಿಳಾಸ ಮತ್ತು 2.1 ಕೋಟಿ ಪಾಸ್?ವರ್ಡ್ ಲೀಕ್ ಆಗಿವೆ ಎಂದು ಹೇಳಲಾಗುತ್ತಿದೆ.
    ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, 77 ಕೋಟಿಗೂ ಹೆಚ್ಚು ಇಮೇಲ್ ವಿಳಾಸಗಳು ಸಾರ್ವಜನಿಕರಿಗೆ ಲೀಕ್ ಆಗಿದ್ದು, ಅಷ್ಟು ಮಾತ್ರವಲ್ಲದೇ ಸುಮಾರು 2.1 ಕೋಟಿ ಪಾಸ್ ವರ್ಡ್?ಗಳೂ ಲೀಕ್ ಆಗಿವೆ ಎಂದು ವರದಿ ಮಾಡಿದೆ,. ವರದಿಯ ಅನ್ವಯ ಮೆಗಾ ಎಂಬ ಶೇರಿಂಗ್ ವೆಬ್ ಸೈಟ್ ನಲ್ಲಿ ಲೀಕ್ ಆಗಿರುವ ಈ ಎಲ್ಲಾ ಡೇಟಾಗಳು ಮೊದಲು ಪ್ರಕಟವಾಗಿದ್ದು ಟ್ರಾಯ್ ಹಂಟ್ ಎಂಬ ಸೆಕ್ಯೂರಿಟಿ ರಿಸರ್ಚರ್ ಅವರ ಕಣ್ಣಿಗೆ ಬಿದ್ದಿದೆ. ಇದಾದ ಬಳಿಕ ಮೆಗಾ ವೆಬ್ ಸೈಟ್‍ನಿಂದ ಈ ಡೇಟಾವನ್ನು ತೆಗೆದುಹಾಕಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
     ವರದಿಯಲ್ಲಿರುವಂತೆ ಬಹುತೇಕ ವೆಬ್ ಸೈಟ್ ಗಳು ಲಾಗಿನ್ ಹಾಗೂ ಪಾಸ್ ವರ್ಡ್ ಗಳನ್ನು ಯಥಾವತ್ತಾಗಿ ಸಂಗ್ರಹಿಸುವುದಿಲ್ಲ. ಸಂಕೀರ್ಣ ನಂಬರ್ ಗಳಿರುವ ಹ್ಯಾಷ್ ರೂಪದಲ್ಲಿ ಪಾಸ್ ವರ್ಡ್ ಸಂಗ್ರಹವಾಗುತ್ತದೆ. ಈ ಹ್ಯಾಷ್ ಗಳು ನಮ್ಮ ಪಾಸ್ವರ್ಡ್ಗೆ  ಕವಚದಂತೆ ಕಾರ್ಯನಿರ್ವಹಿಸುತ್ತವೆ. ಹ್ಯಾಕರ್ ಗಳು ಇದೇ ಹ್ಯಾಷ್ ಗಳನ್ನ ಕ್ರ್ಯಾಕ್ ಮಾಡಿ ಪಾಸ್ವರ್ಡ್ ಗಳನ್ನ ಹ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ. ಇಂಥಹ ಸುಮಾರು 2.1 ಕೋಟಿ ಪಾಸ್ವರ್ಡ್?ಗಳು ಲೀಕ್ ಆಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಲಾಗಿದೆ.
      ಡೇಟಾ ಲೀಕ್ ಆಗಿದೆಯಾ? ಪರೀಕ್ಷಿಸುವುದು ಹೇಗೆ?
    ಸೆಕ್ಯೂರಿಟಿ ರೀಸರ್ಚರ್ ಟ್ರಾಯ್ ಹಂಟ್ ಅವರು ತಮ್ಮ ' 'Have I Been Pwned' ವೆಬ್ ಸೈಟ್ನಲ್ಲಿ ಈ ಎಲ್ಲಾ ಡೇಟಾವನ್ನು ಫೀಡ್ ಮಾಡಿದ್ದಾರೆ. ಯಾರಿಗಾದರೂ ಅವರ ಇಮೇಲ್ ವಿಳಾಸ ಮತ್ತು ಪಾಸ್ ವರ್ಡ್ ಲೀಕ್ ಆಗಿದೆ ಎಂದೆನಿಸಿದರೆ ಈ ವೆಬ್ ಸೈಟ್ ನಲ್ಲಿ ಹೋಗಿ ಪರೀಕ್ಷಿಸಬಹುದು ಎಂದು ಹಂಟ್ ಹೇಳಿದೆ.  ಹ್ಯಾಕರ್ ಗಳು ಹೆಕ್ಕಿರುವ ಮೊದಲ ಪಟ್ಟಿಯಲ್ಲಿ 12 ಸಾವಿರ ಫೈಲ್ ಗಳಲ್ಲಿ ಇಮೇಲ್, ಪಾಸ್ವರ್ಡ್?ಗಳಿರುವ 87 ಜಿಬಿಯಷ್ಟು ಗಾತ್ರದ ಡೇಟಾವನ್ನು ಸಂಗ್ರಹಿಸಲಾಗಿತ್ತು. ಅಂತರ್ಜಾಲ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ಸೆಕ್ಯೂರಿಟಿ ಲೀಕ್ ಎನ್ನಲಾಗಿದೆ. ನೀವು ಹಂಟ್ ಅವರ ವೆಬ್ ಸೈಟ್?ಗೆ ಹೋಗಿ ಪರೀಕ್ಷಿಸಲು ಅನುಮಾನವಿದ್ದರೆ ಕೂಡಲೇ ನಿಮ್ಮ ಇಮೇಲ್ ಗಳ ಪಾಸ್ವರ್ಡ್ ಗಳನ್ನ ಬದಲಿಸುವುದು ಉತ್ತಮ ಎಂಬುದು ತಜ್ಞರು ತಿಳಿಸುತ್ತಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries