HEALTH TIPS

ಸುಳ್ಳು ಸುದ್ದಿಗೆ ಬ್ರೇಕ್; ಫಾರ್ವರ್ಡ್ ಮಸೇಜ್ ಗಳ ಕಡಿತಗೊಳಿಸಿದ ವಾಟ್ಸಪ್!

   
        ನವದೆಹಲಿ: ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ಸುಳ್ಳು ಸುದ್ದಿಗಳು ಮತ್ತು ಗಾಸಿಪ್ ಗಳನ್ನು ನಿಯಂತ್ರಿಸಲು ಪ್ರಮುಖ ನಿರ್ಣಯವೊಂದನ್ನು ಕೈಗೊಂಡಿದ್ದು, ಫಾರ್ವರ್ಡ್ ಮಸೇಜ್ ಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.
       ವಾಟ್ಸಪ್ ಹೊಸ ಅಪ್ ಡೇಟ್ ನಲ್ಲಿ ಈ ಬದಲಾವಣೆ ಮಾಡಲಾಗಿದ್ದು, ಮೆಸೆಜ್ ಗಳ ಫಾರ್ವರ್ಡ್ ಗರಿಷ್ಠ ಮಿತಿಯನ್ನು ಕಡಿಮೆಗೊಳಿಸಲಾಗಿದೆ. ಈ ಹಿಂದೆ ಒಂದು ಮೆಸೇಜ್ ಅನ್ನು ಗರಿಷ್ಚ 20 ಮಂದಿಗೆ ಪಾರ್ವರ್ಡ್ ಮಾಡಬಹುದಾಗಿತ್ತು. ಇದೀಗ ಸಂಖ್ಯೆಯನ್ನು ಕೇವಲ 5 ಮಂದಿಗೆ ಇಳಿಸಲಾಗಿದೆ.
      ತನ್ನ ನೂತನ ಬದಲಾವಣೆ ಕುರಿತು ವಾಟಸ್ಪ್ ಸಂಸ್ಥೆ ಗ್ರಾಹಕರಲ್ಲಿ ಜಾಹಿರಾತುಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಅಲ್ಲದೆ ಸುದ್ದಿ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಹಿರಾತು ನೀಡಲೂ ಮುಂದಾಗಿದೆ.
     ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಛೆ ಕಳೆದ ಆರು ತಿಂಗಳಿನಿಂದ ನಾವು ಬಳಕೆದಾರರಿಂದ ಮತ್ತು ತ???ರಿಂದ ಈ ಬಗ್ಗೆ ಪ್ರತಿಕ್ರಿಯೆ ಪಡೆದಿದ್ದು, ಇದೀಗ ಈ ನೂತನ ಬದಲಾವಣೆಗೆ ಮುಂದಾಗಿದ್ದೇವೆ. ನೂತನ ಬದಲಾವಣೆ ಇಂದಿನಿಂದಲೇ ಜಾರಿಗೆ ಬರಲಿದೆ. ಬಳಕೆದಾರರು ವಾಟ್ಸ್‍ಪ್ ಅಪ್ ಡೇಟ್ ಮಾಡಿದ ಬಳಿಕ ಈ ನೂತನ ಬದಲಾವಣೆಯನ್ನು ಗಮನಿಸಬಹುದು ಎಂದು ಹೇಳಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries