ಕಾಸರಗೋಡು: ಇಂದು ನ್ಯಾಯಾಲಯದಲ್ಲಿರುವ ಬಹುತೇಕ ಪ್ರಕರಣಗಳಿಗೆ ಮಹಿಳಾ ಆಯೋಗ ಮೂಲಕ ಪರಿಹಾರ ಒದಗಿಸಲು ಸಾಧ್ಯವಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಡಾ.ಶಾಹಿದಾ ಕಮಾಲ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಆಯೋಗದ ಅದಾಲತ್ ಸಂಬಂಧ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳಾ ಆಯೋಗದಲ್ಲಿ ಸಲ್ಲಿಸಲಾಗುವ ದೂರುಗಳಿಗೆ ಶೀಘ್ರದಲ್ಲಿ ತೀರ್ಪು ನೀಡಲು ಸಾಧ್ಯವಾಗುತ್ತಿದೆ ಎಂದವರು ಹೇಳಿದರು. ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶವಿದ್ದರೂ, ಹತ್ತು ತಿಂಗಳಾದರೂ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ವರೆಗಿನ ಮೊಬಲಗು 42,500 ರೂ.ಶೀಘ್ರದಲ್ಲೇ ನೀಡುವಂತೆ, ಮುಂದೆ ಪ್ರತಿ ತಿಂಗಳು 4250 ರೂ. ನೀಡುವಂತೆ ಅದಾಲತ್‍ನಲ್ಲಿ ತೀರ್ಪು ನೀಡಲಾಗಿದೆ.
ಫ್ಲಾಟ್ ಮಾರಾಟ ಪ್ರಕರಣವೊಂದಕ್ಕೆ ಸಂಬಂಧಿಸಿ ದೂರುದಾತನಿಗೆ 60 ಸಾವಿರ ರೂ. ನೀಡುವಂತೆ, ಈ ಮೂಲಕ ದೂರನ್ನು ಹಿಂತೆಗೆದುಕೊಳ್ಳುವಂತೆ ಮಧ್ಯಸ್ಥಿಕೆಯ ಮೂಲಕ ಸಮಸ್ಯೆ ಪರಿಹರಿಸಲಾಯಿತು.
30 ದೂರುಗಳ ಪರಿಶೀಲನೆ ನಡೆಸಲಾಗಿದ್ದು, 12 ಅಹವಾಲುಗಳಿಗೆ ತೀರ್ಪು ನೀಡಲಾಗಿದೆ. 6 ದೂರುಗಳಿಗೆ ಸಂಬಂ„ಸಿ ಪೆÇಲೀಸ್ ಮತ್ತು ಇತರ ಇಲಾಖೆಗಳ ಅಧಿಕಾರಿಗಳಲ್ಲಿ ವರದಿ ಯಾಚಿಸಲಾಗಿದೆ. ಎರಡು ಪ್ರಕರಣಗಳಲ್ಲಿ ಕೌನ್ಸಿಲಿಂಗ್ ನೀಡಲು ನಿರ್ಧರಿಸಲಾಗಿದೆ. 9 ದೂರುಗಳನ್ನು ಮುಂದಿನ ಅದಾಲತ್‍ನಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಯಿತು.
ಆಯೋಗ ಸದಸ್ಯೆ ಇ.ಎಂ.ರಾಧಾ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಲೀಗಲ್ ಪ್ಯಾನೆಲ್ ಸದಸ್ಯರಾದ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ, ನ್ಯಾಯವಾದಿ ಎಸ್.ಎನ್.ಸರಿತಾ, ಮಹಿಳಾ ಘಟಕ ಎಸ್.ಐ. ಎಂ.ಜೆ.ಎಲ್ಸಮ್ಮ, ಸಿ.ಪಿ.ಒ.ಬಿ.ಸುಪ್ರಭಾ, ಕೌನ್ಸಿಲರ್ ಎಸ್.ರಮ್ಯ ಕುಮಾರಿ ಮೊದಲಾವರು ಉಪಸ್ಥಿತರಿದ್ದರು.


