ಕಾಸರಗೋಡು: ಪ್ರತಿಷ್ಠಿತ ಸಾಂಸ್ಕøತಿಕ ಸಂಸ್ಥೆ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ನಡೆದು ಬರುತ್ತಿರುವ ನಾಟಕ, ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಸಮಾರೋಪ ಜ.27 ರಂದು ಕಾಸರಗೋಡು ಲಲಿತಕಲಾ ಸದನದಲ್ಲಿ ನಡೆಯಲಿದೆ.
ರಂಗಭೂಮಿ ಮತ್ತು ಯಕ್ಷಗಾನ ಕಲಾ ಪ್ರಕಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಭೆಯನ್ನು ಮಿಂಚಿದ ಕಲಾವಿದರನೇಕರು ಕಾಸರಗೋಡಿಗೆ ಕೀರ್ತಿ ತಂದಿದ್ದಾರೆ. ಇದು ಅಭಿಮಾನದ ವಿಷಯ. ವೃತ್ತಿಪರ ಕಲಾವಿದರು ಈ ಪ್ರದೇಶದಲ್ಲಿಲ್ಲ. ಹವ್ಯಾಸಿಗಳು ಸ್ವಸಾಮಥ್ರ್ಯದಿಂದ ರಂಗದಲ್ಲಿ ಮಿಂಚಿ ಪ್ರತಿಭೆಯನ್ನು ಮೆರೆದಿದ್ದಾರೆ. ವಿದ್ಯಾರ್ಥಿ ಯುವಜನರಲ್ಲಿ ರಂಗಾಸಕ್ತಿಯನ್ನು ಬೆಳೆಸಲು ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ. ಸಮರ್ಥ ರಂಗ ನಿರ್ದೇಶಕ, ಬಹುಮುಖ ಪ್ರತಿಭಾವಂತ ರಂಜಾನ್ ಸಾಬ್ ಉಳ್ಳಾಗಡ್ಡಿ ಅವರ ನಿರ್ದೇನದಲ್ಲಿ ಕಾಸರಗೋಡು ಕನ್ನಡ ಮಾಧ್ಯಮ ಶಾಲೆಯಾದ ಬಿಇಎಂ ಹೈಸ್ಕೂಲಿನ ಮಕ್ಕಳಿಗೆ ಕಳೆದ ಒಂದು ತಿಂಗಳಿನಿಂದ ರಂಗತರಬೇತಿ ನಡೆಯುತ್ತಾ ಬಂದಿದೆ. ಇದೇ ಮಕ್ಕಳು ಕುವೆಂಪು ವಿರಚಿತ `ಬೊಮ್ಮನ ಹಳ್ಳಿ ಕಿಂದರಿ ಜೋಗಿ' ನಾಟಕವನ್ನು ಪ್ರದರ್ಶಿಸಲಿದ್ದಾರೆ. ಕಾಸರಗೋಡು ಪರಿಸರದ ಹವ್ಯಾಸಿ ಕಲಾವಿದರೂ ತರಬೇತಿ ಪಡೆದು `ಶ್ರೀಪಥ' ನಾಟಕ ರಂಗಕ್ಕಿಳಿಸಲಿದ್ದಾರೆ.
ಯಕ್ಷಗಾನದ ಸವ್ಯಸಾಚಿ ಕಲಾವಿದ, ಯಕ್ಷಗುರು ಪಡುಮಲೆ ಜಯರಾಮ ಪಾಟಾಳಿ ಅವರ ನಿರ್ದೇಶನದಲ್ಲಿ ಯಕ್ಷಗಾನ ತರಬೇತಿ ಕೂಡಾ ನಡೆಯುತ್ತಿದ್ದು, ಸಮಾರೋಮ ಸಮಾರಂಭದಲ್ಲಿ `ಶ್ರೀ ಕೃಷ್ಣ ಲೀಲಾಮೃತ' ಪ್ರಸಂಗವನ್ನು ಪ್ರಸ್ತುತ ಪಡಿಸಲಾಗುವುದು. ಈ ತರಬೇತಿಯಲ್ಲಿ ಕಾಸರಗೋಡಿನ ಮಹಿಳೆಯರು, ಮಕ್ಕಳು ಸಕ್ರಿಯವಾಗಿ ಭಾಗವಹಿಸಿ ಭರವಸೆ ಮೂಡಿಸಿದ್ದಾರೆ.
ಇದೇ ಮೊದಲ ಬಾರಿ ಗಡಿನಾಡಿನಲ್ಲಿ ನಾಟಕ-ಯಕ್ಷಗಾನ ತರಬೇತಿ ನಡೆಯುತ್ತಿದ್ದು ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವರು. ಇದಕ್ಕೆ ಕಾರಣಕರ್ತರಾದವರು ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಹಾಗೂ ಇತರ ಪದಾಧಿಕಾರಿಗಳು ಅಭಿನಂದನಾರ್ಹರು.


