ಕುಂಬಳೆ: ಸಂತರಂತೆ ಸಾಧನೆಗೈದ ಅನೇಕ ಸಾಧಕರ ಕೊಡುಗೆಗಳಿಂದ ಕನ್ನಡ ಭಾಷೆ, ಸಂಸ್ಕøತಿ ಬೆಳೆದು ಬಂದಿದೆ. ಗಡಿನಾಡು ಕಾಸರಗೋಡು ಸೊಲ್ಲಾಪುರದಂತೆ ಕನ್ನಡದ ಸಮೃದ್ಧತೆಗೆ ಅಗಣಿತ ಕೊಡುಗೆ ನೀಡಿದೆ ಎಂದು ಕೇ0ದ್ರ ಸಚಿವ ರಮೇಶ್ ಜಿಗಜಿಣಗಿ ತಿಳಿಸಿದರು.
ಕೈರಳಿ ಪ್ರಕಾಶನ ಸುಬ್ಬಯ್ಯ ಕಟ್ಟೆಯು ಮಂಗಳೂರಿನ ಓಶಿಯನ್ ಪಲ್9 ಸಭಾಂಗಣದಲ್ಲಿ ಶನಿವಾರ ಸಂಜೆ ಏಪ9ಡಿಸಿದ್ದ ಕೇಳು ಮಾಸ್ತರ್ ಅಗಲ್ಪಾಡಿ ಸ0ಪಾದಿಸಿ ಬರೆದಿರುವ ಕಾಸರಗೋಡಿನ ಸಿರಿಗನ್ನಡ ಸಾಹಿತಿಗಳು ಭಾಗ1 ಕೃತಿ ಲೋಕಾಪ9ಣೆಗೊಳಿಸಿ, ಕನ್ನಡ ಕೈರಳಿಯ 12ನೇ ವಾಷಿ9ಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ, ಸಂಸ್ಕೃತಿಗಳ ಸಾಧಕರನ್ನು ಹೊಸ ತಲೆಮಾರಿಗೆ ಪರಿಚಯಿಸುವ ಪ್ರಯತ್ನಗಳು ಬದುಕಿನ ಸಾಕಾರತೆಯ ಅತ್ಯುಚ್ಚ ಕೊಡುಗೆಯಾಗಿದೆ.ಇತಿಹಾಸದ ಸ್ಮರಿಸುವಿಕೆಯ ತಳಹದಿಯಲ್ಲಿ ನೆಲೆಗೊಳ್ಳುವ ಸಂಸ್ಕೃತಿ-ಭಾಷೆಗಳು ವಿಶಾಲವಾಗಿ ತೆರೆದುಕೊ0ಡು ಭವಿಷ್ಯದ ಸಾಮಾಜಿಕ ನೆಮ್ಮದಿಗೆ ಕಾರಣವಾಗಿ ನೆಲೆ-ಬೆಲೆಯೊದಗಿಸುತ್ತದೆ ಎ0ದು ತಿಳಿಸಿದರು.
ಕಸಾಪ ದಕ್ಷಿಣ ಕನ್ನಡ ಜಿಲ್ಲಾ ಘಟಕಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಿಧ್ಯಮಯ ಭಾಷೆ, ಜೀವನ ಕ್ರಮಗಳ ಗಡಿನಾಡು ಕಾಸರಗೋಡಿನ ಅಂತರಂಗದ ಏಕಧ್ವನಿ ಅದು ಕನ್ನಡ ಮಾತ್ರ ಎ0ದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಗಳೂರಿನ ಸಮಸದ ನಳಿನ್ ಕುಮಾರ್ ಕಟೀಲು ಅವರು ಈ ಸಂದರ್ಭ ಮಾತನಾಡಿ, ಭಾಷೆಯು ಜನರೊಳಗೆ ಪರಸ್ಪರ ಏಕೀಕರಣಕ್ಕೆ ಕಾರಣವಾಗುತ್ತದೆ. ಕರ್ನಾಟಕದೊಳಗಿನ ಪ್ರದೇಶಗಳಿಗಿಂತ ಕಾಸರಗೋಡಿನ ಕನ್ನಡ ಪರಿಶುದ್ದವಾಗಿ ಗಮನ ಸೆಳೆಯುತ್ತಿದೆ ಎಂದು ತಿಳಿಸಿದರು. ಅಲ್ಪಸಂಖ್ಯಾತತೆಯು ಯಾವಾಗಲೂ ಭಯ ಮತ್ತು ಪ್ರೇಮಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಕಾಸರಗೊಡಿನ ಕನ್ನಡ ಎಂದಿಗೂ ಅಳಿಯದೆ ಸ್ವಚ್ಚ ಕನ್ನಡವಾಗಿ ಉಳಿದು ಬೆಳೆಯುತ್ತಿದೆ. ಕಾಸರಗೋಡಿನ ಯಕ್ಷಗಾನ, ರಂಗಭೂಮಿ ಮತ್ತು ಸಾಹಿತ್ಯಗಳು ಕನ್ನಡ ಭಾಷಾ ಸಮೃದ್ದತೆಯ ಮಕುಟಗಳು ಎಂದು ತಿಳಿಸಿದರು.
ಮಂಗಳೂರು ನಗರಪಾಲಿಕೆಯ ಮಹಾಪೌರ ಕೆ.ಭಾಸ್ಕರ, ಮಂಗಳೂರು ಬಾನುಲಿ ನಿಲಯದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಗಡಿನಾಡ ಕಲಾ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕೃತಿಯ ಸಂಪಾದಕ ಕೇಳು ಮಾಸ್ತರ್ ಅಗಲ್ಪಾಡಿ, ಕೇರಳ ಬ್ಯಾರಿ ಅಕಾಡೆಮಿ ಸದಸ್ಯ ಝಡ್ ಎ.ಕಯ್ಯಾರು, ವಕೀಲ ಗಂಗಾಧರ ಉಳ್ಳಾಲ, ಕನ್ನಡ ಕೈರಳಿಯ ಎ.ಆರ್.ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದು ಶುಭಹಾರ್ಯಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಪತ್ರಿಕಾ ವರದಿಗಾರ ಜಗದೀಶ್ಚಂದ್ರ ಅಂಚನ್ ಸೂಟರ್ಪೇಟೆ, ಸಮಾಜ ಸೇವಕ ಬಿ.ಸದಾಶಿವ ಅವರನ್ನು ಗೌರವಿಸಲಾಯಿತು. ಅಖಿಲೇಶ್ ನಗುಮುಗಂ ಸ್ವಾಗತಿಸಿ, ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.


