ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಸುಗಮ ಸಂಗೀತ ಮತ್ತು ಕೀ ಬೋರ್ಡ್ ವಾದನ ಕಾರ್ಯಕ್ರಮವು ಜನಮನ ರಂಜಿಸಿತು.
ಬದಿಯಡ್ಕದ ವಿದ್ಯಾಪಲ್ಲವಿ ಸಂಗೀತ ಶಾಲೆಯ ನಿರ್ದೇಶಕ ವಿದ್ವಾನ್ ನಟರಾಜ ಶರ್ಮ ಬಳ್ಳಪದವು ಮತ್ತು ಅವರ ಶಿಷ್ಯರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಮಹಿಮಾ,ತಸ್ಮೈ,ಶ್ರೀವತ್ಸ, ಮಾನಸ,ವಿವೇಕ್, ಪ್ರದ್ಯುಮ್ನ, ಚಿನ್ಮಯಿ ನೂಜಿ,ಚಂದನ್ ಅವರು ಭಾವಗೀತೆ,ಭಕ್ತಿಗೀತೆ,ದೇಶಭಕ್ತಿಗೀತೆ,ಚಲನಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.ಕಾರ್ತಿಕ್ ಶ್ಯಾಮ್,ಆತ್ರೇಯಿ,ಕಾರ್ತಿಕ್ ಕೃಷ್ಣ,ಧನುಷ್ ಕೀಬೋರ್ಡಿನಲ್ಲಿ ಜಾನಪದ ಗೀತೆಗಳನ್ನು ನುಡಿಸಿದರು.ಸ್ಮಿತಾ ಉದಯಪ್ರಕಾಶ ತಂಡದ ನಿರೂಪಣೆ ಮಾಡಿದರು.ಶಿವಾನಂದ ಉಪ್ಪಳ ತಬಲಾದಲ್ಲಿ ಸಾಥ್ ನೀಡಿದರು.
ಕಾರ್ಯಕ್ರಮವನ್ನು ನಡೆಸಿಕೊಟ್ಟು ಗೀತೆಗಳನ್ನು ಹಾಡಿದ ನಟರಾಜ ಶರ್ಮ ಅವರನ್ನು ಗ್ರಂಥಾಲಯದ ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜ ಪಿ ಗೌರವಿಸಿದರು.ಅಧ್ಯಕ್ಷ ಕೆ.ನರಸಿಂಹ ಭಟ್ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಸುಧೀರ್ ಕೃಷ್ಣ ಪಿ.ಎಲ್ ನಿರೂಪಿಸಿದರು.ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ವಂದಿಸಿದರು.


