HEALTH TIPS

ಮಕರ ಸಂಕ್ರಾಂತಿಗೆ ಪ್ರಯಾಗದ ಕುಂಭಮೇಳದಲ್ಲಿ ಮಿಂದೆದ್ದ ಸಾವಿರಾರು ಭಕ್ತರು

     
     ಪ್ರಯಾಗ್ ರಾಜ್: ಮಕರ ಸಂಕ್ರಾಂತಿಯ ಶುಭ ಮುಂಜಾನೆ ಸಾವಿರಾರು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸೇರಿದ ಸಂದರ್ಭದಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಭಕ್ತಿಯಿಂದ ಕುಂಭ ಮೇಳದಲ್ಲಿ ಪಾಲ್ಗೊಂಡು ಮಿಂದೆದ್ದರು.
     ಕುಂಭಮೇಳ ಸಂದರ್ಭದಲ್ಲಿ ಸಕಲ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸಂಗಮದಲ್ಲಿ ಸ್ನಾನದ ಘಾಟ್ ಪ್ರದೇಶದಲ್ಲಿ 5 ಕಿಲೋ ಮೀಟರ್ ಉದ್ದದವರೆಗೆ ಸಂಚರಿಸುವ ಭಕ್ತರಿಗೆ ಅನುಕೂಲವಾಗಲು ತೆಪ್ಪದ ಸೇತುವೆ ನಿರ್ಮಿಸಲಾಗಿತ್ತು. ಭಕ್ತರ ಪ್ರವೇಶ ಮತ್ತು ನಿರ್ಗಮಕ್ಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
    ಮಧ್ಯರಾತ್ರಿ ಕಳೆದ ಕೂಡಲೇ ಸಾವಿರಾರು ಭಕ್ತರು ದೇಶ ವಿದೇಶಗಳಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕುಂಭಮೇಳೆದ ಶುಭ ಮುಹೂರ್ತದಲ್ಲಿ ಧಾರ್ಮಿಕ ಪಠಣಗಳು, ಭಜನೆಗಳು ಕೇಳಿಬಂದವು.
   ಇಲ್ಲಿನ ಕುಂಭ ಮೇಳದಲ್ಲಿ 45 ನಿಮಿಷಗಳ ಶಾಹಿ ಸ್ನಾನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕಲ್ಪಿಸಿದ್ದು ಅದು ಈ ದಿನದ ನಿರ್ದಿಷ್ಟ ಗಳಿಗೆಯಲ್ಲಿ ನಡೆಯಲಿದೆ. ಪ್ರತಿ ಆರು ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತಿದ್ದು ಮಹಾ ಕುಂಭ ಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries