ಉಪ್ಪಳ: ಉಪ್ಪಳದ ಸಾಮಾಜಿಕ ಸಂಘಟನೆ ಯುವಭಾರತಿ ಇದರ ವತಿಯಿಂದ ಇತ್ತೀಚೆಗೆ ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ನುಡಿನಮನ ಕಾರ್ಯಕ್ರಮ ಬುಧವಾರ ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ಜರಗಿತು.
ನುಡಿನಮನ ಕಾರ್ಯಕ್ರಮದಲ್ಲಿ ಯುವಭಾರತಿ ಅಧ್ಯಕ್ಷ ರತೀಶ ಐಲ, ಹಿರಿಯರಾದ ಶಿವಾನಂದ ಉಪ್ಪಳ ಉಪಸ್ಥಿತರಿದ್ದರು. ಸ್ವಾಮೀಜಿಯವರ ಸಮಾಜ ಮುಖಿ ಜೀವನ, ಬಡವರ ಬಗ್ಗೆ ಇರುವ ಕಾಳಜಿ, ವಿದ್ಯಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಯುವಭಾರತಿ ಸಂಘಟನಾ ಕಾರ್ಯದರ್ಶಿ ಜಗದೀಶ ಪ್ರತಾಪನಗರ ನುಡಿನಮನದ ಮೂಲಕ ತಿಳಿಸಿದರು. ಬಳಿಕ ಮೌನ ಪ್ರಾರ್ಥನೆ ನಡೆಯಿತು. ಪ್ರವೀಣ ಪ್ರತಾಪನಗರ ಪ್ರಾರ್ಥನೆ ಹಾಡಿದರು. ನುಡಿನಮನ ಕಾರ್ಯಕ್ರಮದಲ್ಲಿ ಯುವಭಾರತಿ ಸದಸ್ಯರು ಉಪಸ್ಥಿತರಿದ್ದರು.


