ಲೋಕಸಭೆ ಚುನಾವಣೆ ಸಿದ್ಧತೆ : ತರಬೇತಿ ಕಾರ್ಯಕ್ರಮ ಜಿಲ್ಲೆಯಲ್ಲಿ 17,376 ಮತದಾತರ ಹೆಚ್ಚಳ : ಸಹಾಯಕ ಜಿಲ್ಲಾಧಿಕಾರಿ ರಮೇಂದ್ರನ್
0
ಫೆಬ್ರವರಿ 12, 2019
ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಸಿದ್ದತೆ ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಜ.31 ವರೆಗೆ ಮತದಾತರ ಪಟ್ಟಿಯಲ್ಲಿ 17,376 ಮಂದಿಯ ಹೆಚ್ಚಳವಾಗಿದೆ ಎಂದು ಚುನಾವಣೆ ವಿಭಾಗ ಡೆಪ್ಯೂಟಿ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್ ತಿಳಿಸಿದರು.
ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿದ್ಯುನ್ಮಾನ ಮತದಾನ ಯಂತ್ರ , ವಿವಿಪಾಟ್ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಜೇಶ್ವರ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 6147 ಮಂದಿ ಕಾಸರಗೋಡು ವಿದಾನಸಭೆ ಕ್ಷೇತ್ರ ಮಟ್ಟದಲ್ಲಿ 2596 ಮಂದಿ, ಹೊಸದರ್ಗ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 2455 ಮಂದಿ, ತ್ರಿಕರಿಪುರ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 3030 ಮಂದಿಯನ್ನು ನೂತನವಾಗಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದವರು ನುಡಿದರು.
ಈ ಮೂಲಕ ಜಿಲ್ಲೆಯಲ್ಲಿ ಮತದಾತರರ ಸಂಖ್ಯೆ ಒಟ್ಟು 9,86,170ಆಗಿದೆ. ಇವರಲ್ಲಿ 4,81,967 ಮಂದಿ ಪುರುಷರೂ, 5,04,203 ಮಹಿಳೆಯರಾಗಿದ್ದಾರೆ. ಚುನಾವಣೆ ಅಭ್ಯರ್ಥಿ ನಾಮಪತ್ರಿಕೆ ಹಿಂತೆಗೆತ ದಿನಾಂಕ ವರೆಗೆ ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಾರ್ವಜನಿಕರಿಗೆ ಅವಕಾಶಗಳಿವೆ ಎಂದವರು ತಿಳಿಸಿದರು.
ಮತದಾನ ಯಂತ್ರ ಕುರಿತು ವ್ಯಾಪಕ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ಆದೇಶ ಪ್ರಕಾರ ತರಬೇತಿ ಕಾರ್ಯಕ್ರಮ ನಡೆಸಲಾಗಿತ್ತು. ಮತಯಂತ್ರ ಸಂಬಂಧ ಜನತೆಯ ಸಂಶಯ ನಿವಾರಿಸುವ ನಿಟ್ಟಿನಲ್ಲಿ ಒಂದು ಗ್ರಾಮದಲ್ಲಿ ಕನಿಷ್ಠ 5 ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದವರು ಹೇಳಿದರು. ಈಕಾರ್ಯಕ್ರಮದ ಮೊದಲ ಹಂತವಾಗಿ ಈ ತರಬೇತಿ ನಡೆದಿದೆ. ಚುನಾವಣೆ ಕ್ರಮ ಹೆಚ್ಚುವರಿ ಸುಧಾರಿತಗೊಳ್ಳುವ ನಿಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ನಡೆಸುವ ಮೋಕ್ ಪೋಲಿಂಗ್ ನಲ್ಲಿಕಡ್ಡಾಯವಾಗಿ 50 ಬಾರಿ ಮತದಾನ ನಡೆಸಬೇಕಿದ್ದು, ವಿವಿಪಾಟ್ ನಲ್ಲಿ ಲಭಿಸುವ ಸ್ಲಿಪ್ಗಳನ್ನು ಮತದೊಂದಿಗೆ ಹೋಲಿಸಿ ಖಚಿತಪಡಿಸಿ, ಸೀಲ್ ಮಾಡಿ ಸಂರಕ್ಷಿಸಬೇಕು ಎಂದು ತರಬೇತಿ ನೇತೃತ್ವ ನೀಡಿದ ಜಿಲ್ಲಾ ಮಟ್ಟದ ತರಬೇತುದಾರ ಗಣೇಶ್ ಶೆಣೈ ತಿಳಿಸಿದರು.
ಮಂಜೇಶ್ವರ ತಹಸೀಲ್ದಾರ್ ವಿ.ಜೋನ್ ವರ್ಗೀಸ್, ಜ್ಯೂನಿಯರ್ ವರಿಷ್ಟಾಧಿಕಾರಿ ಎಸ್.ಗೋವಿಂದನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಆರ್.ಜಯಾನಂದ, ಟಿ.ನಾರಾಯಣನ್ , ಇ.ಮನೋಜ್ ಕುಮಾರ್, ಕೆ.ಪಿ.ವತ್ಸಲನ್, ಪಿ.ಕೆ.ನಿಷಾಂತ್, ಟಿ.ಇ.ಅಬ್ದುಲ್ಲ, ಸಿ.ಎಚ್.ಅಹಮ್ಮದ್, ಎಂ.ಎಸ್.ಅಬ್ದುಲ್ ಷುಕೂರ್,ಟಿ.ಎ.ರಂಝಾನ್, ಅಬ್ದುಲ್ಲ ಚೆಂಗಳ, ಅಬ್ದುಲ್ ಹಕೀಂ, ಎಂ.ಕುಂಞÂಂಬು ನಂಬ್ಯಾರ್, ನ್ಯಾಷನಲ್ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು.

