ಅರ್ಜಿ ಕೋರಿಕೆ
0
ಫೆಬ್ರವರಿ 12, 2019
ಕಾಸರಗೋಡು: ಕಾಸರಗೋಡು ಸರಕಾರಿ ಅಂಧ ವಿದ್ಯಾಲಯ ಆವರಣದಲ್ಲಿ ಚಟುವಟಿಕೆ ನಡೆಸುತ್ತಿರುವ ಸರಕಾರಿ ಸ್ಪೆಷ್ಯಲ್ಟೀಚರ್ಸ್ ಟ್ರೈನಿಂಗ್ ಸೆಂಟರ್ ನಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಸ್ಪೆಷ್ಯಲ್ ಟೀಚರ್ಸ್ ಟ್ರ್ಯಣಿಂಗ್ (ಡಿ.ಎಸ್.ಎಸ್.ಇ.ಎಂ.ಆರ್.) ತರಬೇತಿಗೆ ಅರ್ಜಿ ಕೋರಲಾಗಿದೆ.
ರೀಹೇಬಿಲಿಟೇಷನ್ ಕೌನ್ಸಿಲ್ ಆಫ್ ಇಂಡಿಯಾದ ಅಂಗೀಕಾರವಿರುವ ತರಬೇತಿ ಬೌದ್ಧಿಕ ಸವಾಲುಗಳನ್ನೆದುರಿಸುತ್ತಿರುವರ ಪ್ರಗತಿಗಾಗಿ ಪ್ರತ್ಯೇಕ ಶಿಕ್ಷಣ ತರಬೇತಿಗೆ ಆದ್ಯತೆ ನೀಡಲಾಗುತ್ತಿದೆ. ಅರ್ಜಿದಾರರು ಪ್ಲಸ್ಟು/ ತತ್ಸಮಾನ ಪರೀಕ್ಷೆಯಲ್ಲಿಕನಿಷ್ಠ ಶೇ 50 ಅಂಕ ಪಡೆದವರಾಗಿರಬೇಕು. ಆಲ್ ಇಂಡಿಯಾ ಆನ್ ಲೈನ್ ಆಪ್ಟಿಟ್ಯೂಡ್ ಟೆಸ್ಟ್ ಮೂಲಕ ಪ್ರವೇಶಾತಿ ನಡೆಯಲಿದೆ. ಪ್ಲಸ್ ಟು ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು. ಮಾ.15ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 9645619918, 8086474212 ಸಂಪರ್ಕಿಸಬಹುದು.

