ಮಂಗಳೂರು ಸಹಪಂಕ್ತಿ ಭೋಜನ 180ನೇ ವರ್ಷಾಚರಣೆ : 15ರಂದು ಸಿದ್ಧತಾ ಸಮಿತಿ ಸಭೆ
0
ಫೆಬ್ರವರಿ 12, 2019
ಮಂಜೇಶ್ವರ: ಮಂಗಳೂರು ಸಹಪಂಕ್ತಿ ಭೋಜನದ 180ನೇ ವರ್ಷಾಚರಣೆ ಸಂಬಂಧ ಸಿದ್ಧತಾ ಸಮಿತಿ ಸಭೆ ಫೆ.15ರಂದು ಸಂಜೆ 4 ಗಂಟೆಗೆ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಅವರ ನಿವಾಸ ಗಿಳಿವಿಂಡು ವಿನಲ್ಲಿ ನಡೆಯಲಿದೆ.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ತಾತಾ ದಿ.ಸಾಹುಕರ ನಾರಾಯಣ ಪೈ ಅವರು 1839ನೇ ಇಸವಿಯಲ್ಲಿ ಮಂಗಳೂರಿನಲ್ಲಿ ಸಹಪಂಕ್ತಿ ಭೋಜನ ನಡೆಸಿ ಮಾನವ ಸಮಾನತೆ ಸಂದೇಶ ಸಾರಿದ ಸ್ಮರಣೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ. ಸಹೃದಯರು ಕ್ಲಪ್ತ ಸಮಯದಲ್ಲಿ ಹಾಜರಿರುವಂತೆ ಗೋವಿಂದ ಪೈ ಸ್ಮಾರಕ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಕಾರ್ಯದರ್ಶಿ ಕೆ.ಆರ್.ಜಯಾನಂದ, ಇತರ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವರು.

