ಕನ್ನಡ ಮಾಧ್ಯಮ ಹೈಯರ್ ಸೆಕೆಂಡರಿ ತತ್ಸಮಾನ ಪುಸ್ತಕ ರಚನೆ ಕಾರ್ಯಾಗಾರ
0
ಫೆಬ್ರವರಿ 12, 2019
ಕಾಸರಗೋಡು: ಕನ್ನಡ ಭಾಷೆಯಲ್ಲಿರುವ ಹೈಯರ್ ಸೆಕೆಂಡರಿ ತತ್ಸಮಾನ ಪುಸ್ತಕ ರಚನೆ ಕಾರ್ಯಾಗಾರ ಜರುಗಿತು.
ಜಿಲ್ಲಾ ಸಾಕ್ಷರತಾ ಮಿಷನ್ ವತಿಯಿಂದ 2018-19 ವರ್ಷದ ಯೋಜನೆಯಲ್ಲಿ ಅಳವಡಿಸಿ ಜಾರಿಗೊಳಿಸುವ ಕಾರ್ಯಾಗಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಕಾರ್ಯಾಗಾರ ಉದ್ಘಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕನ್ನಡ ಭಾಷೆಯಲ್ಲಿ ಹೈಯರ್ ಸೆಕೆಂಡರಿ ತತ್ಸಮಾನ ತರಗತಿ ಮಂಜೂರುಗೊಳ್ಳುವ ಮೂಲಕ ಐತಿಹಾಸಿಕ ಸಾಧನೆಯ ರೂಪದಲ್ಲಿ ಮುನ್ನಡೆಯೊಂದು ಸಾಧಿಸಿದಂತಾಗಿದೆ ಎಂದು ಹೇಳಿದರು.
ರಾಜ್ಯ ಸಾಕ್ಷರತಾ ಮಿಷನ್ ಸಹಾಯಕ ಸಂಚಾಲಕ ಕೆ.ಅಯ್ಯಪ್ಪನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಶಾಜು ಜೋನ್ ಸ್ವಾಗತಿಸಿದರು. ಕಾರ್ಯಾಗಾರ ಸಂಚಾಲಕ ಸತ್ಯನಾರಾಯಣ ರಾವ್ ವಂದಿಸಿದರು.
850 ಮಂದಿ ನೋಂದಣಿ:
ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಹೈಯರ್ ಸೆಕೆಂಡರಿ ತತ್ಸಮಾನ ತರಬೇತಿಗೆ 850ಮಂದಿ ಹೆಸರು ನೋಂದಣಿ ನಡೆಸಿದ್ದಾರೆ. 12 ಹೈಯರ್ ಸೆಕೆಂಡರಿ ತತ್ಸಮಾನ ಕೇಂದ್ರಗಳು ಜಿಲ್ಲೆಯಲ್ಲಿ ಆರಂಭಗೊಂಡಿವೆ.
ಕನ್ನಡ ಮಾಧ್ಯಮ ತತ್ಸಮಾನ ತರಬೇತಿಯ ಔಪಚಾರಿಕ ಉದ್ಘಾಟನೆ ಈ ತಿಂಗಳಕೊನೆಯಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.

