HEALTH TIPS

ದಣಿಗಳೇ ಹಿಂಗಂದ್ ಮ್ಯಾಲೆ ನಾವೇನ್ ಮಾಡೋಣ-ಕಿತ್ತೋದ ಅಧಿಕಾರ್ ವಿಲ್ದೆ ಬೇರೇನ್ ಮಾಡೋಣ! ಬೇಕಲ ವ್ಯಾಪ್ತಿಯ ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ: ಹಂತಕರಿಗೆ ಶಿಕ್ಷೆ ಆಗುವವರೆಗೂ ವಿರಾಮಿಸುವುದಿಲ್ಲ- ರಾಹುಲ್!

ನವದೆಹಲಿ: ಬೇಕಲ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಯುವ ಕಾಂಗ್ರೆಸ್ ಕಾರ್ಯಕರ್ತರ ಬರ್ಬರ ಹತ್ಯೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಆಶ್ಚರ್ಯಕರ ಟೀಟ್ ಮೂಲಕ ದಂಗುಗೊಳಿಸಿದ್ದಾರೆ. ಘಟನೆಯಿಂದ ಕೇರಳ ಆತಂಕಗೊಂಡಿದ್ದು, ಹಂತಕರಿಗೆ ಶಿಕ್ಷೆಗೊಳಪಡಿಸದೆ ಕಾಂಗ್ರೆಸ್ ಪಕ್ಷ ವಿರಾಮಿಸುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಯುವ ಕಾಂಗ್ರೆಸ್ ಸದಸ್ಯರ ಹತ್ಯೆಯಿಂದ ಕೇರಳದಲ್ಲಿ ಆತಂಕ ಮನೆ ಮಾಡಿದ್ದು, ಪಕ್ಷ ಅವರ ಕುಟುಂಬ ಸದಸ್ಯರ ಪರವಾಗಿ ನಿಲ್ಲಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಮೃತರ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. Rahul Gandhi ✔ @RahulGandhi The brutal murder of two members of our Youth Congress family in Kasargod, Kerala is shocking. The Congress Party stands in solidarity with the families of these two young men & I send them my deepest condolences. We will not rest till the murderers are brought to justice. 27.4K 8:49 AM - Feb 18, 2019 Twitter Ads info and privacy 9,627 people are talking about this ಈ ಮಧ್ಯೆ ಜಿಲ್ಲೆಯ ಹಲವು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾಂಗ್ರೆಸ್ಸ್-ಯುಡಿಎಫ್ ಬಣ ಎಡರಂಗದೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದು, ರಾಹುಲ್ ಗಾಂಧಿಯವರ ಟ್ವೀಟ್ ಕಾರ್ಯಕರ್ತರಲ್ಲಿ ಇಕ್ಕಟ್ಟನ್ನು ಸೃಷ್ಟಿಸಿದೆ. ಈ ಪೈಕಿ ಎಣ್ಮಕಜೆ ಹಾಗೂ ಕಾರಡ್ಕ ಗ್ರಾ.ಪಂ. ಗಳ ಆಡಳಿತವನ್ನು ಇತ್ತೀಚೆಗೆ ಮೈತ್ರಿ ಪಕ್ಷಗಳು ಜೊತೆಯಾಗಿ ನಡೆಸುತ್ತಿದ್ದು, ಒಟ್ಟು ಭಾನುವಾರದ ಘಟನೆಯ ಬಳಿಕ ಪಕ್ಷದಹಲವು ನಿಷ್ಠಾವಂತ ಕಾರ್ಯಕರ್ತರ ತುಮುಲಕ್ಕೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries