ಮಕ್ಕಳ ಮನರಂಜಿಸಿದ ಸಹವಾಸ ಶಿಬಿರ
0
ಮಾರ್ಚ್ 27, 2019
ಮುಳ್ಳೇರಿಯ : ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಮಂಗಳವಾರ ಆರಂಭವಾದ 3 ದಿನಗಳ ಶಿಬಿರದಲ್ಲಿ ಬುಧವಾರದಂದು ಸಾಹಿತಿ ವಿರಾಜ್ ಅಡೂರು ಚುಟುಕು ರಚನೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಚಿತ್ರ ಕಲಾ ಶಿಕ್ಷಕಿ ಅನಿತಾ ಮುಳ್ಳೇರಿಯ ಅವರಿಂದ ಚಿತ್ರಕಲೆಯ ಕುರಿತು ಕಾರ್ಯಾಗಾರ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಕರಕುಶಲ ವಸ್ತುಗಳ ತಯಾರಿಯ ಕುರಿತಾಗಿ ಮಾಹಿತಿ ನೀಡಲಾಯಿತು. ಶಾರದಾ ಭಟ್ ಬೈತನಡ್ಕ ಶಿಬಿರ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಸಮಿತಿ ಮುಖಂಡರಾದ ಪ್ರೇಮ ಭಾರಿತ್ತಾಯ, ವೆಂಕಟ್ರಾಜ್, ಬಾಲಸುಬ್ರಹ್ಮಣ್ಯ ಭಟ್ ಬೈತನಡ್ಕ, ಶಿಕ್ಷಕಿಯರಾದ ಚೈತ್ರಾ, ರಾಜಶ್ರೀ, ಸುಶ್ಮಿತಾ, ಸ್ಮಿತಾ, ಪ್ರೇಮಾವತಿ, ಭಾರತಿ ಮೊದಲಾದವರು ಭಾಗವಹಿಸಿದ್ದರು. ಅಪರಾಹ್ನ ನಡೆದ ಶಿಬಿರದಲ್ಲಿ ಲಕ್ಷ್ಮಣ ಪೊನಾರಂ ಅವರು ಅಭಿನಯ ಸಹಿತವಾಗಿ ಪುರಾಣ ಕಥೆಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಪ್ರತೀಕ್ ಹಾಗೂ ರಘು ಅವರಿಂದ ನೃತ್ಯ ಭಜನೆ, ಜಯಪ್ರಕಾಶ್ ಅವರಿಂದ ಆಟೋಟಗಳ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಸುಮಾರು 50ಕ್ಕೂ ಮಕ್ಕಳು ಭಾಗವಹಿಸಿದ್ದಾರೆ. ಮಾ.28ರಂದು ಸಹವಾಸ ಶಿಬಿರವು ಮುಕ್ತಾಯವಾಗಲಿದ್ದು, ಮುಖ್ಯ ಅತಿಥಿಯಾಗಿ ಚೈತ್ರಾ ಅಡೂರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ದೀಪಪ್ರದಾನ ಮಾ.30ರಂದು : ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಮಾ.30ರಿಂದು ಬೆಳಗ್ಗೆ 10ರಿಂದ ದೀಪಪ್ರದಾನ ಹಾಗೂ ಮೋಹನ ಭಾರಿತ್ತಾಯ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಅರವಿಂದ ಕುಮಾರ್ ಎನ್ ಕೆ ಸಂಸ್ಮರಣಾ ಭಾಷಣ ಮಾಡುವರು. ಈ ಸಂದರ್ಭದಲ್ಲಿ 5ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪಪ್ರದಾನ ನಡೆಯಲಿದೆ. ಮಾ.31ರಂದು ಬೆಳಗ್ಗೆ 10.30ಕ್ಕೆ ಶಾಲಾ ಸಮಿತಿ ಹಾಗೂ ಹಿತೈಷಿಗಳ ವಿಶೇಷ ಸಭೆಯನ್ನು ಕರೆಯಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಕಟಣೆ ತಿಳಿಸಿದೆ.

